ಮಹೀಂದ್ರಾ ಕಂಪನಿ ತನ್ನ XUV300 ಫೇಸ್ಲಿಫ್ಟ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಜ್ಜಾಗಿದೆ. ಶೀಘ್ರದಲ್ಲೇ ಇದು ರಸ್ತೆಗಿಳಿಯಲಿದೆ. ಈ ಪ್ರಮುಖ ನವೀಕರಿಸಿದ ಮಾದರಿಯನ್ನು ಪರಿಚಯಿಸುವ ಮೊದಲು, ಬ್ರ್ಯಾಂಡ್ ಅಸ್ತಿತ್ವದಲ್ಲಿರುವ XUV300 ಲೈನ್-ಅಪ್ ಅನ್ನು “ರ್ಯಾಂಪ್ ಡೌನ್” ಮಾಡಲು ಕಂಪನಿ ನಿರ್ಧರಿಸಿದೆ. ಅಸ್ತಿತ್ವದಲ್ಲಿರುವ XUV300 ಲೈನ್-ಅಪ್ ಅನ್ನು ಬೇಡಿಕೆಗೆ ಅನುಗುಣವಾಗಿ ಸರಿಹೊಂದಿಸಲಾಗುತ್ತದೆ.
ಪ್ರಸ್ತುತ XUV300 SUVಯ ಒಟ್ಟು 16 ಪೆಟ್ರೋಲ್ ಮತ್ತು 9 ಡೀಸೆಲ್ ರೂಪಾಂತರಗಳಿವೆ. ಆದರೆ ಫೇಸ್ಲಿಫ್ಟೆಡ್ ಮಾಡೆಲ್ನ ರೂಪಾಂತರಗಳು ಮತ್ತು ಪವರ್ಟ್ರೇನ್ ಲೈನ್-ಅಪ್ ಕುರಿತು ಮಾಹಿತಿ ಇನ್ನೂ ಲಭ್ಯವಿಲ್ಲ. ಮಹೀಂದ್ರಾ ಅಸ್ತಿತ್ವದಲ್ಲಿರುವ XUV300 ಬುಕಿಂಗ್ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ ಎಂದು ಘೋಷಿಸಿದೆ.
XUV300 ಮತ್ತು XUV400 EV ಪ್ರಸ್ತುತ ಒಟ್ಟು 9,000 ಕ್ಕಿಂತ ಕಡಿಮೆ ಬಾಕಿ ಇರುವ ಬುಕಿಂಗ್ಗಳನ್ನು ಹೊಂದಿವೆ. ನವೀಕರಿಸಿದ SUV ಲಾಂಚ್ ವೇಳೆಗೆ ಅದನ್ನು ತೆರವುಗೊಳಿಸುವ ನಿರೀಕ್ಷೆ ಇದೆ.
XUV300 ಫೇಸ್ಲಿಫ್ಟ್ನಲ್ಲಿ ಹೊಸದೇನಿದೆ ?
XUV300 ಫೇಸ್ಲಿಫ್ಟ್ನಲ್ಲಿ ಹಲವಾರು ನವೀಕರಣಗಳನ್ನು ನಿರೀಕ್ಷಿಸಲಾಗಿದೆ. XUV700 ಲೈನ್-ಅಪ್ ಮತ್ತು ಮುಂಬರುವ ಬಾರ್ನ್-EV ಶ್ರೇಣಿಯಂತಹ ಹೊಸ ಮಹೀಂದ್ರಾ ಮಾದರಿಗಳನ್ನು ಹೋಲುವ ಹೊಸ ಮುಂಭಾಗ ಮತ್ತು ಹಿಂಭಾಗದ ಮುಖಗಳೊಂದಿಗೆ ಇದು ಕಂಗೊಳಿಸಲಿದೆ. ಒಳಾಂಗಣಕ್ಕೂ ಹೊಸ ಲುಕ್ ಇರಲಿದೆ. ಎರಡು 10.25-ಇಂಚಿನ ಸ್ಕ್ರೀನ್ಗಳನ್ನು ಇದು ಒಳಗೊಂಡಿರುತ್ತದೆ, ಒಂದು ಇನ್ಫೋಟೈನ್ಮೆಂಟ್ ಮತ್ತು ಇನ್ನೊಂದು ಇನ್ಸ್ಟ್ರುಮೆಂಟೇಶನ್ಗಾಗಿ.
XUV300 ಫೇಸ್ಲಿಫ್ಟ್ನ ಒಳಾಂಗಣವನ್ನು ಕಳೆದ ತಿಂಗಳು ಬಿಡುಗಡೆ ಮಾಡಲಾದ ನವೀಕರಿಸಿದ XUV400 EV ನಲ್ಲಿ ಪೂರ್ವವೀಕ್ಷಣೆ ಮಾಡಲಾಗಿದೆ. ಪವರ್ಟ್ರೇನ್ ವಿಷಯದಲ್ಲಿ ಯಾವುದೇ ಪ್ರಮುಖ ಬದಲಾವಣೆಗಳ ಸಾಧ್ಯತೆಯಿಲ್ಲ. ಅಸ್ತಿತ್ವದಲ್ಲಿರುವ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ಗಳು ಮುಂದುವರಿಯಲಿವೆ. ಆದಾಗ್ಯೂ ಹೊಸ XUV300 EV ಈ ವರ್ಷದ ಕೊನೆಯಲ್ಲಿ ಮಾರಾಟಕ್ಕೆ ಲಭ್ಯವಿರುತ್ತದೆ. XUV300 EV ಗಾತ್ರದಲ್ಲಿ XUV400 EV ಗಿಂತ ಚಿಕ್ಕದಾಗಿರುತ್ತದೆ. ಇದು Nexon EVಗೆ ಪೈಪೋಟಿ ನೀಡಲಿದೆ.