ಇಸ್ಲಾಮಾಬಾದ್: ಪಾಕಿಸ್ತಾನದ ಇಸ್ಲಾಮಾಬಾದ್ ಬಳಿ ಶನಿವಾರ ಮುಂಜಾನೆ 4.7 ತೀವ್ರತೆಯ ಭೂಕಂಪ ಸಂಭವಿಸಿದೆ. ಇಸ್ಲಾಮಾಬಾದ್ ಬಳಿ ಶನಿವಾರ ಬೆಳಿಗ್ಗೆ ರಿಕ್ಟರ್ ಮಾಪಕದಲ್ಲಿ 4.7 ರಷ್ಟು ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.
ಇದರ ಆಳವು 190 ಕಿಲೋಮೀಟರ್ ಎಂದು ದಾಖಲಾಗಿದೆ. ಈವರೆಗೂ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿಗೆ ಹಾನಿಯಾದ ಬಗ್ಗೆ ವರದಿಯಾಗಿಲ್ಲ.
ಇನ್ನು ಕಳೆದ ವಾರ ಶನಿವಾರ ರಾತ್ರಿ, ಪಾಕಿಸ್ತಾನದ ಅನೇಕ ನಗರಗಳಲ್ಲಿ ಪ್ರಬಲ ಭೂಕಂಪನದ ಅನುಭವವಾಗಿದೆ. ಈ ಸಮಯದಲ್ಲಿ, ರಾಜಧಾನಿ ಇಸ್ಲಾಮಾಬಾದ್, ಲಾಹೋರ್ ಮತ್ತು ಪೇಶಾವರದ ಜನರಲ್ಲಿ ಭೀತಿ ಹರಡಿತು. ಪಾಕಿಸ್ತಾನ ಹವಾಮಾನ ಇಲಾಖೆ (ಪಿಎಂಡಿ) ಪ್ರಕಾರ, ಇಸ್ಲಾಮಾಬಾದ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ 4.9 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದ ಆಳ 142 ಕಿ.ಮೀ ಮತ್ತು ಭೂಕಂಪದ ಕೇಂದ್ರಬಿಂದು ಹಿಂದೂ ಕುಶ್ ಪ್ರದೇಶವಾಗಿದೆ ಎಂದು ಪಿಎಂಡಿ ತಿಳಿಸಿದೆ.