![](https://kannadadunia.com/wp-content/uploads/2024/02/Karnataka-budjet.jpg)
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯನವರು 2024-25ನೇ ಸಾಲಿನ ರೂ 3,71,383 ಕೋಟಿ ರೂಪಾಯಿ ಗಾತ್ರದ ಬಜೆಟ್ ಅನ್ನು ಮಂಡಿಸಿದ್ದಾರೆ. ಶಿಕ್ಷಣ, ಕೃಷಿ, ಆರೋಗ್ಯ ಸೇರಿ ವಿವಿಧ ಇಲಾಖೆಗಳಿಗೆ ಸಾವಿರಾರು ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.
2024-25ನೇ ಸಾಲಿನ ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಯಾವ ಇಲಾಖೆಗೆ ಎಷ್ಟು ಕೋಟಿ ರೂ.ಮೀಸಲಿಡಲಾಗಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ
ಶಿಕ್ಷಣ : 44,422 ಕೋಟಿ (12%)
ಮಹಿಳಾ-ಮಕ್ಕಳ ಕಲ್ಯಾಣ: 34,406 ಕೋಟಿ (9%)
ಇಂಧನ : 23,159 ಕೋಟಿ (6%)
ಗ್ರಾಮೀಣಾಭಿವೃದ್ಧಿ : 21,160 ಕೋಟಿ (5%)
ಸಾರಿಗೆ: 19,777 ಕೋಟಿ (5%)
ನೀರಾವರಿ :19,179 ಕೋಟಿ (5%)
ನಗರಾಭಿವೃದ್ಧಿ : 18,155 ಕೋಟಿ (5%)
ಆರೋಗ್ಯ : 15,145 ಕೋಟಿ (4%)
ಸಮಾಜ ಕಲ್ಯಾಣ: 13,334 ಕೋಟಿ (3%)
ಲೋಕೋಪಯೋಗಿ :10,424 ಕೋಟಿ (3%)
ಆಹಾರ : 9,993 ಕೋಟಿ (3%)
ಕೃಷಿ ತೋಟಗಾರಿಕೆ : 6,688 ಕೋಟಿ (2%)
ಪಶುಸಂಗೋಪನೆ: 3,307 ಕೋಟಿ (1%)