ಕೆಲಸದ ಒತ್ತಡ ಸಹಜ. ಬಹುತೇಕ ಎಲ್ಲರದ್ದೂ ಈಗ ಬ್ಯುಸಿ ಲೈಫ್. ಬೆಳಗ್ಗೆ ಕಚೇರಿಗೆ ಹೋದರೆ ರಾತ್ರಿ ಮನೆಗೆ ಮರಳುತ್ತಾರೆ. ಈ ಜೀವನಶೈಲಿಯಿಂದಾಗಿ ಜನರ ಸಂಬಂಧಗಳು ಮತ್ತು ವೈವಾಹಿಕ ಜೀವನಕ್ಕೂ ತೊಂದರೆಯಾಗುತ್ತಿದೆ. ಅನೇಕ ಬಾರಿ ಕೆಲಸದ ಒತ್ತಡದಿಂದಾಗಿ ತಮ್ಮ ಸಂಗಾತಿಗೆ ಏನು ಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಆಯಾಸ ಹಾಗೂ ಒತ್ತಡದಿಂದಾಗಿ ಸಂಗಾತಿಗೆ ಸಮಯ ಮೀಸಲಿಡಲು ಸಾಧ್ಯವಾಗುವುದಿಲ್ಲ. ರಾತ್ರಿ ಊಟ ಮುಗಿಸಿ ಮಲಗಿಬಿಡುತ್ತಾರೆ.
ಈ ರೀತಿ ಒಬ್ಬರಿಗೊಬ್ಬರು ಸಮಯ ಕೊಡದೇ ಇದ್ದಾಗ ಸಂತೋಷವಾಗಿರಲು ಸಾಧ್ಯವಾಗುವುದಿಲ್ಲ. ಈ ವಿಚಾರದಲ್ಲಿ ಸಾಕಷ್ಟು ಒತ್ತಡವನ್ನು ಸಹ ಎದುರಿಸಬೇಕಾಗುತ್ತದೆ. ವೈವಾಹಿಕ ಜೀವನದಲ್ಲಿ ಆಸಕ್ತಿ ಉಳಿಸಿಕೊಳ್ಳಲು ಕೆಲವೊಂದು ಸಲಹೆಗಳನ್ನು ಪಾಲಿಸಬೇಕು.
ಖಾಸಗಿಯಾಗಿ ಮಾತನಾಡಿ
ಬಿಡುವಿಲ್ಲದ ವೇಳಾಪಟ್ಟಿಯಲ್ಲಿ ನಿಮ್ಮ ಸಂಗಾತಿಗಾಗಿ ಸ್ವಲ್ಪ ಸಮಯವನ್ನು ಮೀಸಲಿಡಿ. ಆ ಸಮಯದಲ್ಲಿ ನಿಮ್ಮಿಬ್ಬರ ನಡುವೆ ಯಾರೂ ಇರಬಾರದು. ಫೋನ್‌ಗಳನ್ನು ದೂರವಿಡಿ, ಖಾಸಗಿ ವಿಚಾರಗಳನ್ನು ಹಂಚಿಕೊಳ್ಳಿ.
ಜೊತೆಯಾಗಿ ಚಹಾ ಸವಿಯಿರಿ
ಬಿಡುವಿಲ್ಲದ ಕೆಲಸದ ನಡುವೆಯೂ ಕೆಲವೊಂದು ಕೆಲಸಗಳನ್ನು ಸಂಗಾತಿಯೊಟ್ಟಿಗೆ ಮಾಡಬೇಕು. ಬೆಳಿಗ್ಗೆ ಒಟ್ಟಿಗೆ ಕುಳಿತು ಚಹಾ ಸವಿಯುವ ಅಭ್ಯಾಸ ಮಾಡಿಕೊಳ್ಳಿ. ಅಥವಾ ಮನೆಗೆ ಬೇಕಾದ ಹಣ್ಣು, ತರಕಾರಿ, ಹಾಲು ಇವನ್ನೆಲ್ಲ ಖರೀದಿಸಲು ಹೋಗಬಹುದು.
ಜೊತೆಯಾಗಿದ್ದಾಗ ಫೋನ್ ಮುಟ್ಟಬೇಡಿ
ಸಂಗಾತಿಯೊಂದಿಗೆ ಇದ್ದಾಗ ಮೊಬೈಲ್, ಟಿವಿ ಅಥವಾ ಲ್ಯಾಪ್‌ಟಾಪ್ ಇತ್ಯಾದಿಗಳಿಂದ ದೂರವಿರಿ. ಸಂಗಾತಿಯೊಂದಿಗೆ ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಪ್ರಸ್ತುತವಾಗಿರುವುದು ಮುಖ್ಯವಾಗಿದೆ.
ಮಿನಿ ಬ್ರೇಕ್ ತೆಗೆದುಕೊಳ್ಳಿ
ಸಂಗಾತಿಯೊಂದಿಗೆ ಸ್ವಲ್ಪ ಸಮಯ ಕಳೆಯುವುದು ಮುಖ್ಯ. ನೀವು ವಾರಾಂತ್ಯದಲ್ಲಿ ಸಣ್ಣ ಪ್ರವಾಸವನ್ನು ಯೋಜಿಸಬಹುದು ಅಥವಾ ದೀರ್ಘ ರಜೆಯನ್ನು ತೆಗೆದುಕೊಳ್ಳಿ. ಇದು ಪರಸ್ಪರ ಸಂಪರ್ಕ ಹೊಂದುವ ಭಾವನೆಯನ್ನು ಉಂಟುಮಾಡುತ್ತದೆ.
ರಾತ್ರಿ ಮಲಗುವ ಮುನ್ನ ಮಾತನಾಡಿ
ರಾತ್ರಿ ಮಲಗುವ ಮುನ್ನ ಪರಸ್ಪರ ಮಾತನಾಡಿ. ನಿಮ್ಮ ದಿನ ಹೇಗಿತ್ತು ಮತ್ತು ನಿಮ್ಮ ದಿನವಿಡೀ ಏನಾಯಿತು ಎಂದು ಪರಸ್ಪರ ಹೇಳಿಕೊಳ್ಳಿ.ಈ ರೀತಿ ಮಾಡುವುದರಿಂದ ಸಂಗಾತಿಗಳಲ್ಲಿ ಹೊಸತನವಿರುತ್ತದೆ.