ದಕ್ಷಿಣ ಲೆಬನಾನ್ ನಾದ್ಯಂತ ಹಳ್ಳಿಗಳ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ನಾಲ್ಕು ಮಕ್ಕಳು ಸೇರಿದಂತೆ ಒಂಬತ್ತು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯ ನಿರ್ದೇಶಕರು ಮತ್ತು ಲೆಬನಾನ್ ಭದ್ರತಾ ಮೂಲಗಳು ತಿಳಿಸಿವೆ.
ಲೆಬನಾನ್ ಸಶಸ್ತ್ರ ಗುಂಪು ತನ್ನ ಫೆಲೆಸ್ತೀನ್ ಮಿತ್ರ ಹಮಾಸ್ಗೆ ಬೆಂಬಲವಾಗಿ ವಿವಾದಿತ ಗಡಿಯುದ್ದಕ್ಕೂ ರಾಕೆಟ್ಗಳನ್ನು ಉಡಾಯಿಸಿದ ನಂತರ ಹೆಜ್ಬುಲ್ಲಾ ಮತ್ತು ಇಸ್ರೇಲ್ ಮಿಲಿಟರಿ ನಾಲ್ಕು ತಿಂಗಳಿಗೂ ಹೆಚ್ಚು ಕಾಲ ಇಸ್ರೇಲ್-ಲೆಬನಾನ್ ಗಡಿಯಲ್ಲಿ ಗುಂಡಿನ ಚಕಮಕಿ ನಡೆಸುತ್ತಿವೆ.
ಅಲ್-ಸವಾನಾ ಗ್ರಾಮದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಎರಡು ಭದ್ರತಾ ಮೂಲಗಳು ತಿಳಿಸಿವೆ.
ನಬತಿಹ್ ನ ಕಟ್ಟಡದ ಮೇಲೆ ನಡೆದ ದಾಳಿಯಲ್ಲಿ ಇನ್ನೂ ಇಬ್ಬರು ಮಕ್ಕಳು, ಮೂವರು ಮಹಿಳೆಯರು ಮತ್ತು ಒಬ್ಬ ಪುರುಷ ಸಾವನ್ನಪ್ಪಿದ್ದಾರೆ ಎಂದು ಪಟ್ಟಣದ ಆಸ್ಪತ್ರೆಯ ನಿರ್ದೇಶಕ ಹಸನ್ ವಾಜ್ನಿ ಮತ್ತು ಭದ್ರತಾ ಮೂಲಗಳು ತಿಳಿಸಿವೆ.