ಬಳ್ಳಾರಿ: ನಕಲಿ ದಾಖಲೆ ಸೃಷ್ಟಿಸಿ ಜಾಮೀನು ನೋಂದಣಿ ಮಾಡಿದ ಆರೋಪದ ಮೇಲೆ ಬಳ್ಳಾರಿಯ ಉಪ ನೋಂದಣಾಧಿಕಾರಿ ಸೇರಿ 8 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಉಪ ನೋಂದಣಾಧಿಕಾರಿ ರವಿಕುಮಾರ್ ಆರ್., ಕಂದಾಯ ನಿರೀಕ್ಷಕ ರಾಜೇಶ್ ಕುಮಾರ್, ಗ್ರಾಮ ಲೆಕ್ಕಿಗ ಶಿವಕುಮಾರ್, ಮಲ್ಲಿಕಾರ್ಜುನ ಸೇರಿದಂತೆ ಎಂಟು ಜನರ ವಿರುದ್ಧ ಬಳ್ಳಾರಿಯ ಮೋಕಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಯ್ಯಮ್ಮ ಅವರಿಗೆ ಬೆಣಕಲ್ಲು ಗ್ರಾಮದಲ್ಲಿ ಒಂದು ಎಕರೆ 80 ಸೆಂಟ್ಸ್ ಜಾಗವಿದ್ದು, ಆರೋಪಿ ಮಲ್ಲಿಕಾರ್ಜುನ ಎಂಬುವರು ಅಯ್ಯಮ್ಮ ಎಂಬ ನಕಲಿ ವ್ಯಕ್ತಿ ಕರೆತಂದು ನಕಲಿ ದಾಖಲೆ ಬಳಸಿ ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ ಎನ್ನಲಾಗಿದ್ದು, ಅಯ್ಯಮ್ಮ ನೀಡಿದ ದೂರಿನ ಅನ್ವಯ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.