ಕೊಪ್ಪಳ : ಪತಿಯನ್ನು ಥಳಿಸಿದ ಕಿರಾತಕರು ಪತ್ನಿ ಮೇಲೆ ಗ್ಯಾಂಗ್ ರೇಪ್ ನಡೆಸಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಗಂಗಾವತಿ ಕೇಂದ್ರೀಯ ಬಸ್ ನಿಲ್ದಾಣದ ಎದುರಿನ ಉದ್ಯಾನವನದಲ್ಲಿ ಈ ಘಟನೆ ನಡೆದಿದ್ದು, ಕಿರಾತಕರ ಗುಂಪೊಂದು ಪತಿಯನ್ನು ಥಳಿಸಿ ಪತ್ನಿ ಮೇಲೆ ಅತ್ಯಾಚಾರ ಎಸಗಿದೆ.
ಘಟನೆ ಹಿನ್ನೆಲೆ
ಗಂಡ ಹೆಂಡತಿಯರ ನಡುವೆ ಮನಸ್ಥಾಪ ಉಂಟಾದ ಹಿನ್ನೆಲೆ ಇಬ್ಬರು ಪರಸ್ಪರ ದೂರ ಆಗಿದ್ದರು. ನಂತರ ಇಬ್ಬರು ಪರಸ್ಪರ ಹುಡುಕಿಕೊಂಡು ಬಂದು ಕೊಪ್ಪಳದ ಗಂಗಾವತಿ ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿರುವ ಕೇಂದ್ರ ಬಸ್ ನಿಲ್ದಾಣದಲ್ಲಿ ಭೇಟಿಯಾಗಿದ್ದಾರೆ. ಈ ವೇಳೆ ಇಬ್ಬರು ಮತ್ತೆ ಗಲಾಟೆ ಶುರು ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಇದನ್ನು ಗಮನಿಸಿದ ದುಷ್ಕರ್ಮಿಗಳ ಗುಂಪೊಂದು ಅಲ್ಲಿಗೆ ಬಂದು ಪತಿ ಮೇಲೆ ಹಲ್ಲೆ ನಡೆಸಿ ಪತ್ನಿಗೆ ಕಿರುಕುಳ ನೀಡಿದ್ದಾರೆ. ಮಹಿಳೆ ರಕ್ಷಣೆಗಾಗಿ ಸಮೀಪದ ನೆಹರೂ ಪಾರ್ಕ್ ಕಡೆಗೆ ಓಡಿ ಹೋಗಿದ್ದಾಳೆ. ಮಹಿಳೆಯನ್ನು ಬೆನ್ನಟ್ಟಿದ ಕಿರಾತಕರು ಮಹಿಳೆಯ ಬಟ್ಟೆ ಹರಿದು ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಗಂಡ ಹಾಗೂ ಸ್ಥಳೀಯರು ಬರುವಷ್ಟರಲ್ಲಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.