ಬೆಂಗಳೂರು: ಅಂಚೆ ಕಚೇರಿಯಲ್ಲಿ ಖಾತೆ ಹೊಂದಿದ ಗ್ರಾಹಕರು ಸಮೀಪದ ಅಂಚೆ ಕಚೇರಿಗಳಿಗೆ ತೆರಳಿ ಮೊಬೈಲ್ ಸಂಖ್ಯೆ ಜೋಡಣೆ ಮಾಡಿಸಿಕೊಂಡು ಎಸ್ಎಂಎಸ್ ಸೇವೆ ಪಡೆದುಕೊಳ್ಳುವಂತೆ ಅಂಚೆ ಇಲಾಖೆ ಮಾಹಿತಿ ನೀಡಿದೆ.
ಹಳೆಯ ಖಾತೆಗಳಿಗೆ ಮೊಬೈಲ್ ಸಂಖ್ಯೆ ಜೋಡಣೆ ಮಾಡದೇ ಇರುವ ಗ್ರಾಹಕರು ಮೊಬೈಲ್ ಸಂಖ್ಯೆ ಜೋಡಣೆ ಮಾಡಿಸಿ ಎಸ್ಎಂಎಸ್ ಸೇವೆ ಪಡೆದುಕೊಳ್ಳಬಹುದು. ಇತ್ತೀಚಿನ ಖಾತೆಗಳಿಗೆ ಮೊಬೈಲ್ ಸಂಖ್ಯೆ ಜೋಡಣೆ ಮಾಡಿ ಖಾತೆ ತೆರೆಯಲಾಗುತ್ತಿದೆ. ಅಂತಹ ಗ್ರಾಹಕರಿಗೆ ತಮ್ಮ ಖಾತೆಯ ಪ್ರತಿ ವ್ಯವಹಾರದ ಮಾಹಿತಿ ಎಸ್ಎಮ್ಎಸ್ ಮೂಲಕ ಮೊಬೈಲ್ ಗೆ ತಲುಪುತ್ತದೆ.
ದಶಕದ ಹಿಂದೆ ಮೊಬೈಲ್ ಜೋಡಣೆ ವ್ಯವಸ್ಥೆ ಇಲ್ಲದ ಅವಧಿಯಲ್ಲಿ ಖಾತೆ ತೆರೆದವರು ಮೊಬೈಲ್ ಸಂಖ್ಯೆ ಜೋಡಣೆ ಮಾಡಿಸಿಲ್ಲ. ಅಂತವರಿಗೆ ಮೊಬೈಲ್ ಗೆ ಸಂದೇಶಗಳು ತಲುಪಿತ್ತಿಲ್ಲ. ಹಳೆಯ ಗ್ರಾಹಕರು ಮೊಬೈಲ್ ಸಂಖ್ಯೆ ಜೋಡಿಸಿಕೊಳ್ಳಬಹುದು. ನಿಷ್ಕ್ರಿಯ ಖಾತೆಗಳ ಗ್ರಾಹಕರು ಖಾತೆ ಚಾಲನೆ ಮಾಡಿಸಿಕೊಳ್ಳಬಹುದು. ಮೊಬೈಲ್ ನಲ್ಲಿಯೇ ತಮ್ಮ ಖಾತೆಯ ವ್ಯವಹಾರದ ಮಾಹಿತಿಗಳನ್ನು ಎಸ್ಎಂಎಸ್ ಮೂಲಕ ಪಡೆದುಕೊಳ್ಳಬಹುದು ಎಂದು ಹೇಳಲಾಗಿದೆ.