ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ. ಅಪಘಾತದಲ್ಲಿ ನೈಜೀರಿಯಾದ ಆಕ್ಸೆಸ್ ಬ್ಯಾಂಕ್ ಗ್ರೂಪ್ನ ಸಿಇಒ ಸೇರಿದಂತೆ ಆರು ಜನರು ಸಾವನ್ನಪ್ಪಿದ್ದಾರೆ.
ದಕ್ಷಿಣ ಕ್ಯಾಲಿಫೋರ್ನಿಯಾದ ಮೊಹಾವಿ ಮರುಭೂಮಿಯಲ್ಲಿ ಈ ಘಟನೆ ನಡೆದಿದೆ. ನೈಜೀರಿಯಾದ ಆಕ್ಸೆಸ್ ಬ್ಯಾಂಕ್ ಗ್ರೂಪ್ನ ಸಿಇಒ, ಅವರ ಪತ್ನಿ ಮತ್ತು ಮಗ ಹೆಲಿಕಾಪ್ಟರ್ನಲ್ಲಿದ್ದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ವರದಿಯ ಪ್ರಕಾರ, ಹೆಲಿಕಾಪ್ಟರ್ ಶುಕ್ರವಾರ ರಾತ್ರಿ 10 ಗಂಟೆಗೆ ಅಪಘಾತಕ್ಕೀಡಾಗಿದೆ. ವಿಮಾನದಲ್ಲಿದ್ದ ಆರು ಜನರಲ್ಲಿ ಆಕ್ಸೆಸ್ ಬ್ಯಾಂಕ್ ಸಿಇಒ ಹರ್ಬರ್ಟ್ ವಿಗ್ವೇ (57) ಕೂಡ ಇದ್ದರು. ನೈಜೀರಿಯಾದ ಸ್ಟಾಕ್ ಎಕ್ಸ್ಚೇಂಜ್ ಎನ್ಜಿಎಕ್ಸ್ ಗ್ರೂಪ್ನ ಮಾಜಿ ಅಧ್ಯಕ್ಷ ಬಾಮೊಫಿನ್ ಅಬಿಂಬೋಲಾ ಒಗುನ್ಬಾಂಜೊ ಕೂಡ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ನೈಜೀರಿಯಾದ ಮಾಜಿ ಹಣಕಾಸು ಸಚಿವ ಎನ್ಗೊಜಿ ಅಕೊಂಜೊ-ಇವೆಲಾ ಇದನ್ನು ದೃಢಪಡಿಸಿದ್ದಾರೆ
ನೈಜೀರಿಯಾದ ಮಾಜಿ ಹಣಕಾಸು ಸಚಿವ ಎನ್ಗೊಜಿ ಅಕೊಂಜೊ-ಇವೆಲಾ ಅವರ ಸಾವನ್ನು ದೃಢಪಡಿಸಿದ್ದಾರೆ. ಎನ್ಗೊಜಿ ಇವೆಲಾ ಈಗ ಡಬ್ಲ್ಯುಟಿಒದ ಮಹಾನಿರ್ದೇಶಕರಾಗಿದ್ದಾರೆ. “ಹೆಲಿಕಾಪ್ಟರ್ ಅಪಘಾತದಲ್ಲಿ ಶ್ರೀ ಹರ್ಬರ್ಟ್ ವಿಗ್ವೆ, ಅವರ ಪತ್ನಿ ಮತ್ತು ಮಗ ಮತ್ತು ಒಗುನ್ಬಾಂಜೊ ಅವರ ದುರಂತ ಸಾವಿನ ಬಗ್ಗೆ ತಿಳಿದು ತುಂಬಾ ದುಃಖವಾಗಿದೆ” ಎಂದು ಅವರು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ತಿಳಿಸಿದ್ದಾರೆ.