ಫೆಬ್ರವರಿ ಅಂದ್ರೆ ಅದು ಪ್ರೇಮದ ತಿಂಗಳು. ಫೆಬ್ರವರಿ ಶುರು ಆಗ್ತಿದ್ದಂತೆ ಪ್ರೇಮಿಗಳು ಖುಷಿಯಾಗ್ತಾರೆ. ತಿಂಗಳ ಆರಂಭದಿಂದ ತಿಂಗಳ ಕೊನೆಯವರೆಗೂ ಪ್ರೇಮದ ಹಬ್ಬದಂತೆ ಇದನ್ನು ಆಚರಣೆ ಮಾಡಲಾಗುತ್ತದೆ. ಫೆಬ್ರವರಿ ಹದಿನಾಲ್ಕರಂದು ಪ್ರೇಮಿಗಳ ದಿನ ಆಚರಣೆ ಮಾಡ್ತಾ ಬರಲಾಗಿದೆ. ಈ ದಿನ ಉಡುಗೊರೆ ನೀಡೋದು ಸಾಮಾನ್ಯ ಸಂಗತಿ. ಈ ಬಾರಿ ನೀವು ನಿಮ್ಮ ಮೂಲ ಸಂಖ್ಯೆ ಆಧಾರದ ಮೇಲೆ ಉಡುಗೊರೆ ನೀಡಿ.
ಸಂಖ್ಯಾಶಾಸ್ತ್ರದ ಪ್ರಕಾರ, ಮೂಲಾಂಕ 1 ಇದ್ದರೆ ಪ್ರೇಮಿಗಳ ದಿನದಂದು ತಮ್ಮ ಸಂಗಾತಿಗೆ ಚಿನ್ನ, ರತ್ನ, ಒಂದು ಮುಖಿ ರುದ್ರಾಕ್ಷಿ ಅಥವಾ ಕಿತ್ತಳೆ ಬಣ್ಣದ ಬಟ್ಟೆ ನೀಡಿ.
ಮೂಲಾಂಕ 2 ಆಗಿದ್ದರೆ ಸಂಗಾತಿಗೆ ಬೆಳ್ಳಿಯಿಂದ ಮಾಡಿದ ಉಡುಗೊರೆಯನ್ನು ನೀಡಬೇಕು. ಎರಡು ಮುಖದ ರುದ್ರಾಕ್ಷಿ, ಚಿಪ್ಪಿನಿಂದ ಮಾಡಿದ ವಸ್ತು, ಶಂಖ, ಮುತ್ತಿಗೆ ಸಂಬಂಧಿಸಿದ ವಸ್ತುವನ್ನು ಗಿಫ್ಟ್ ಆಗಿ ನೀಡಿ.
ಮೂಲಾಂಕ 3 ಆಗಿದ್ದರೆ ಪೆನ್ನು, ಪುಸ್ತಕ ಅಥವಾ ಹಳದಿ ಬಣ್ಣದ ಬಟ್ಟೆ, ಮೇಕಪ್ ಬಾಕ್ಸ್ ಅನ್ನು ಉಡುಗೊರೆಯಾಗಿ ನೀಡಬಹುದು. ಇದು ಸಂಗಾತಿಗೆ ಅದೃಷ್ಟ ತರುತ್ತದೆ.
ಮೂಲಾಂಕ 4 ಆಗಿದ್ದಲ್ಲಿ ಆಕಾಶ ನೀಲಿ ಬಣ್ಣದ ಬಟ್ಟೆಗಳನ್ನು ಉಡುಗೊರೆಯಾಗಿ ನೀಡಿ. ಎಂಟು ಮುಖಿ ರುದ್ರಾಕ್ಷಿ, ವಾಚ್ ಕೂಡ ನೀವು ನೀಡಬಹುದು.
ಮೂಲಾಂಕ 5 ಆಗಿದ್ದರೆ ಬೆಳ್ಳಿ ಆಭರಣ ಅಥವಾ ಹಸಿರು ಬಣ್ಣದ ಬಟ್ಟೆ ನೀಡಿ.
ಮೂಲಾಂಕ 6 ಆಗಿದ್ದವರು ಸಂಗಾತಿಗೆ ಪ್ಲಾಟಿನಂ, ಬೆಳ್ಳಿ ಅಥವಾ ವಜ್ರದಿಂದ ಮಾಡಿದ ವಸ್ತುವನ್ನು ನೀಡಬಹುದು. ಸುಗಂಧ ದ್ರವ್ಯ, ಅಕ್ವೇರಿಯಂ, ಸಂಗೀತಕ್ಕೆ ಸಂಬಂಧಿಸಿದ ವಸ್ತುಗಳನ್ನು ಕೂಡ ನೀಡಬಹುದು.
ಮೂಲಾಂಕ 7 ಇದ್ದಲ್ಲಿ ಅವರು, ತಮ್ಮ ಸಂಗಾತಿಗೆ ಹಳದಿ ಬಟ್ಟೆ, ಹಳದಿ ಹೂವು, ನೌಮುಖಿ ರುದ್ರಾಕ್ಷಿ, ಉತ್ತಮ ಪುಸ್ತಕ ನೀಡಿ.
ಇನ್ನು ಮೂಲಾಂಕ 8 ಆಗಿದ್ದರೆ ಏಳು ಮುಖಿ ರುದ್ರಾಕ್ಷಿ, ಚರ್ಮದಿಂದ ಮಾಡಿದ ಬೆಲ್ಟ್, ಪರ್ಸ್, ಜಾಕೆಟ್ ಅನ್ನು ನೀವು ನೀಡಬಹುದು.
ಮೂಲಾಂಕ 9 ಆಗಿರುವ ಜನರು ಪ್ರೇಮಿಗಳ ದಿನದಂದು ಕೆಂಪು ಬಣ್ಣದ ಬಟ್ಟೆಗಳು, ಕೆಂಪು ಹೂವುಗಳು, ಚಿನ್ನ ಅಥವಾ ಬೆಳ್ಳಿಯ ಆಭರಣ ನೀಡಬಹುದು.