ಅಮೆರಿಕದ ಹವಾಯಿಯಲ್ಲಿ ಪ್ರಬಲ ಭೂಕಂಪನದ ಅನುಭವವಾಗಿದೆ. ಯುಎಸ್ ಭೂಕಂಪಶಾಸ್ತ್ರಜ್ಞರು ಶುಕ್ರವಾರ ಹವಾಯಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ, ಆದರೆ ಸುನಾಮಿ ಬೆದರಿಕೆ ಇಲ್ಲ ಎಂದು ಹೇಳಿದರು.
ಹವಾಯಿಯ ಮುಖ್ಯ ದ್ವೀಪದ ಪಹ್ಲಾ ಬಳಿ 5.7 ತೀವ್ರತೆಯ ಭೂಕಂಪ ಸಂಭವಿಸಿದ್ದು, ಅದರ ಕೇಂದ್ರಬಿಂದು ಭೂಮಿಯ ಮೇಲ್ಮೈಯಿಂದ ಸುಮಾರು 37 ಕಿಲೋಮೀಟರ್ (23 ಮೈಲಿ) ಕೆಳಗೆ ಇದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.
ಮುಖ್ಯ ದ್ವೀಪದಾದ್ಯಂತ ಭೂಕಂಪನದ ಅನುಭವವಾಗಿದೆ ಎಂದು ಯುಎಸ್ಜಿಎಸ್ ಅನ್ನು ಉಲ್ಲೇಖಿಸಿ ವೆಬ್ಸೈಟ್ ವರದಿ ಮಾಡಿದೆ. ಜೀವ ಮತ್ತು ಆಸ್ತಿಪಾಸ್ತಿ ನಷ್ಟದ ಸಂಭವನೀಯತೆ ಕಡಿಮೆ ಎಂದು ಸಂಸ್ಥೆ ತಿಳಿಸಿದೆ.