ಪ್ಲೋರಿಡಾ: ನೈಋತ್ಯ ಫ್ಲೋರಿಡಾದ ರಾಜ್ಯ ಹೆದ್ದಾರಿ 75 ರಲ್ಲಿ ಶುಕ್ರವಾರ ಮಧ್ಯಾಹ್ನ ಸಣ್ಣ ವಿಮಾನವು ತುರ್ತು ಲ್ಯಾಂಡಿಂಗ್ ಮಾಡಲು ಪ್ರಯತ್ನಿಸಿದ ನಂತರ ಇಬ್ಬರು ಸಾವನ್ನಪ್ಪಿದ್ದಾರೆ.
ಕೊಲಿಯರ್ ಕೌಂಟಿಯ ಪೈನ್ ರಿಡ್ಜ್ ರಸ್ತೆ ನಿರ್ಗಮನದ ಬಳಿ ಕ್ರ್ಯಾಶ್ ಲ್ಯಾಂಡಿಂಗ್ ಸಂಭವಿಸಿದೆ, ವಿಮಾನದಲ್ಲಿನ ದೋಷದಿಂದಾಗಿ ವಿಮಾನವನ್ನು ಹೆದ್ದಾರಿಯಲ್ಲಿ ಇಳಿಸಿದ್ದಾರೆ. ಈ ವೇಳೆ ಎದುರಿಗೆ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಯಲ್ಲೇ ವಿಮಾನ ಹೊತ್ತಿ ಉರಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ವಿಮಾನವನ್ನು ಬೊಂಬಾರ್ಡಿಯರ್ ಚಾಲೆಂಜರ್ 600 ಜೆಟ್ ಎಂದು ಗುರುತಿಸಿದೆ ಮತ್ತು ಮಧ್ಯಾಹ್ನ 3: 15 ರ ಸುಮಾರಿಗೆ ಅಪಘಾತ ಸಂಭವಿಸಿದಾಗ ಐದು ಜನರು ವಿಮಾನದಲ್ಲಿದ್ದರು ಎಂದು ಹೇಳಿದರು.