![](https://kannadadunia.com/wp-content/uploads/2019/04/KEA_logo.jpg)
ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕೆ-ಸೆಟ್-2023ರ ಪರೀಕ್ಷೆಯ ಕೀ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸಲು ದಿನಾಂಕ ವಿಸ್ತರಣೆ ಮಾಡಲಾಗಿದೆ.
ಈ ಕುರಿತು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪ್ರಕಟಣೆ ಹೊರಡಿಸಿದ್ದು, ಕೆಸೆಟ್ 2023ರ ಪರೀಕ್ಷೆಗೆ ಸಂಬಂಧಿಸಿದಂತೆ ಕೀ ಉತ್ತರಗಳನ್ನು ಪ್ರಕಟಣೆ ಮಾಡಲಾಗಿರುತ್ತದೆ. ಸದರಿ ಕೀ ಉತ್ತರಗಳ ಕುರಿತು ಆಕ್ಷೇಪಣೆಗಳಿದ್ದಲ್ಲಿ ಕೆಇಎ ವೆಬ್‌ಸೈಟಿನಲ್ಲಿ ಹಾಕಿರುವ ಲಿಂಕ್‌ನ ಮೂಲಕ ಆಕ್ಷೇಪಣೆಗಳನ್ನು ಸಲ್ಲಿಸಬಹುದು. ಕೆಸೆಟ್ 2023ರ ಅಧಿಸೂಚನೆಯಲ್ಲಿ ತಿಳಿಸಿರುವಂತೆ ಪ್ರತಿ ಆಕ್ಷೇಪಣೆಗೆ ರೂ.300/- ರಂತೆ ಆನ್‌ಲೈನ್ ಮೂಲಕ ಪಾವತಿ ಮಾಡಿ, ಆಕ್ಷೇಪಣೆಗಳನ್ನು ಸಲ್ಲಿಸಲು ದಿನಾಂಕ, 17.02.2024ರ ಸಂಜೆ 5.00ರ ವರೆಗೆ ವಿಸ್ತರಿಸಲಾಗಿದೆ.
![](https://kannadadunia.com/wp-content/uploads/2024/02/WhatsApp-Image-2024-02-08-at-9.03.53-AM.jpeg)