alex Certify BIG NEWS : ಈ ಬಾರಿ ವಾಲ್ಮೀಕಿ ಜಾತ್ರೆಗೆ ನಟ ಕಿಚ್ಚ ಸುದೀಪ್ ಗೆ ಆಹ್ವಾನವಿಲ್ಲ..ಯಾಕೆ ಗೊತ್ತೇ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ಈ ಬಾರಿ ವಾಲ್ಮೀಕಿ ಜಾತ್ರೆಗೆ ನಟ ಕಿಚ್ಚ ಸುದೀಪ್ ಗೆ ಆಹ್ವಾನವಿಲ್ಲ..ಯಾಕೆ ಗೊತ್ತೇ..?

ದಾವಣಗೆರೆ : ಈ ಬಾರಿ ನಟ ಕಿಚ್ಚ ಸುದೀಪ್ ಅವರಿಗೆ ವಾಲ್ಮೀಕಿ ಜಾತ್ರೆಗೆ ಆಹ್ವಾನವಿಲ್ಲ. ಹೌದು. ಈ ಮೂಲಕ ಕಿಚ್ಚನನ್ನು ನೋಡಬೇಕು ಎಂದು ಅಂದುಕೊಂಡಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ.

ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ಫೆ.8 ಹಾಗೂ 9 ರಂದು ಜಾತ್ರೆ ನಡೆಯಲಿದ್ದು, ಜಾತ್ರೆಗೆ ಆಹ್ವಾನ ನೀಡದಿರಲು ಜಾತ್ರೆ ಕಮಿಟಿ ನಿರ್ಧರಿಸಿದೆ.

ಈ ಹಿಂದೆ ಜಾತ್ರೆಗೆ ಕಿಚ್ಚ ಸುದೀಪ್ ಬಂದಾಗ ನೂಕು ನುಗ್ಗಲು ಉಂಟಾಗಿ ಭಾರಿ ಗಲಾಟೆ ಆಗಿತ್ತು. ಸುದೀಪ್ ಬಂದಾಗ ಜಾತ್ರೆಯಲ್ಲಿ ಗಲಾಟೆ ಆಗಬಾರದು ಎಂದು ಈ ನಿರ್ಧಾರ ಕೈಗೊಳ್ಳಲಾಗಿದೆ. 2023 ರ ಫೆ.9 ರಂದು ಸಭಾ ಕಾರ್ಯಕ್ರಮಕ್ಕೆ ಸುದೀಪ್ ಬರುತ್ತಾರೆ ಎಂದು ಹೇಳಲಾಗಿತ್ತು, ಆದರೆ ಕೊನೆಗೆ ಸುದೀಪ್ ಬರಲ್ಲ ಎಂದು ಹೇಳುತ್ತಿದ್ದಂತೆ ಅಭಿಮಾನಿಗಳು ಚೇರ್ ಗಳನ್ನು ಪುಡಿ ಮಾಡಿ ಆಕ್ರೋಶ ಹೊರ ಹಾಕಿದ್ದರು. ನಂತರ ಪೊಲೀಸರು ಲಾಠಿಚಾರ್ಜ್ ಮಾಡಿದ್ದರು.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...