HomeAutoBIG NEWS: ಅಪಘಾತದ ವೇಳೆ ತೆರೆಯದ ಏರ್ ಬ್ಯಾಗ್: ಕಾರಿನ ಹಣ ಮರುಪಾವತಿಗೆ ಆದೇಶ

BIG NEWS: ಅಪಘಾತದ ವೇಳೆ ತೆರೆಯದ ಏರ್ ಬ್ಯಾಗ್: ಕಾರಿನ ಹಣ ಮರುಪಾವತಿಗೆ ಆದೇಶ

ಕಾರು ಅಪಘಾತದ ವೇಳೆ ಕಾರಿನ ಏರ್ ಬ್ಯಾಗ್ ತೆರೆಯದ ಕಾರಣ ಕಾರಿನ ಮಾಲೀಕ ಗಂಭೀರವಾಗಿ ಗಾಯಗೊಂಡಿದ್ದು, ಕಾರಿನ ಮಾಲೀಕನಿಗೆ ಕಾರು ಖರೀದಿಸಿದ ಸಂಪೂರ್ಣ ಹಣ ಮರುಪಾವತಿಸುವಂತೆ ಕೇರಳ ಗ್ರಾಹಕರ ಕೋರ್ಟ್ ಆದೇಶ ನೀಡಿದೆ.

ಕೇರಳದ ಮಲಪ್ಪುರ ಜಿಲ್ಲಾ ಗ್ರಾಹಕರ ನ್ಯಾಯಾಲಯ ಮಾರುತಿ ಸುಜುಕಿ ಇಂಡಿಯಾ ಕಂಪನಿಗೆ ಕಾರಿನ ಸಂಪೂರ್ಣ ಹಣವನ್ನು ಮರುಪಾವತಿ ಮಾಡುವಂತೆ ಸೂಚಿಸಿದೆ.

ಇಂಡಿಯಾನೂರ್ ನಿವಾಸಿ ಮೊಹಮ್ಮದ್ ಮುಸ್ಲಿಯಾರ್ ಎಂಬುವವರು ಖರೀದಿಸಿದ್ದ ಕಾರು 2021ರ ಜೂನ್ 30ರಂದು ಅಪಘಾತಕ್ಕೀಡಾಗಿತ್ತು. ಕಾರಿನಲ್ಲಿದ್ದ ಏರ್ ಬ್ಯಾಗ್ ತೆರೆದುಕೊಳ್ಳದ ಕಾರಣ ಅವರು ಗಂಭೀರವಾಗಿ ಗಯಗೊಂಡಿದ್ದರು. ಕಾರಿಗೂ ಹೆಚ್ಚಿನ ಹಾನಿಯಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದ ಸಾರಿಗೆ ವಾಹನ ನಿರೀಕ್ಷಕರು ಕೂಡ ಏರ್ ಬ್ಯಾಗ್ ತೆಗೆದುಕೊಳ್ಳದಿರುವ ಬಗ್ಗೆ ವರದಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಒಂದು ತಿಂಗಳೊಳಗೆ ಸಂತ್ರಸ್ತರಿಗೆ ಕಾರಿನ ಬೆಲೆ 4,35,854 ಹಾಗೂ ದೂರಿನ ಖರ್ಚಾಗಿ 20 ಸಾವಿರ ರೂಪಾಯಿ ಪಾವತಿಸಬೇಕು. ತಪ್ಪಿದರೆ ಶೇ.9ರಷ್ಟು ಬಡ್ಡಿ ಸೇರಿಸಿ ನೀಡಬೇಕಿದೆ ಎಂದು ಆದೇಶ ನೀಡಿದೆ.

 

For Latest News Updates, Join Our Whatsapp Community🚩
RELATED ARTICLES

Most Popular