ದಾವಣಗೆರೆ: ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ದರ ಗಗನಕ್ಕೇರಿದೆ. ಕೆಜಿಗೆ 400 ರೂಪಾಯಿವರೆಗೂ ಮಾರಾಟವಾಗುತ್ತಿದ್ದು, ಬೆಳೆಗಾರರಿಗೆ ಉತ್ತಮ ಬೆಲೆ ಸಿಕ್ಕಿದೆ.
ಯಾದಗಿರಿ ಜಿಲ್ಲೆಯ ಯುವ ರೈತರೊಬ್ಬರು ದಾವಣಗೆರೆ ಮಾರುಕಟ್ಟೆಯಲ್ಲಿ 50 ಚೀಲ ಬೆಳ್ಳುಳ್ಳಿ ಮಾರಾಟ ಮಾಡಿ ಈ ವರ್ಷ ಸುಮಾರು 16 ಲಕ್ಷ ರೂಪಾಯಿ ಆದಾಯ ಗಳಿಸಿದ್ದಾರೆ. ಒಂದು ಕ್ವಿಂಟಾಲ್ ಗೆ ಗರಿಷ್ಟ ದರ 32,500 ರೂ.ಗೆ ಮಾರಾಟವಾಗಿದೆ.
ಸುಮಾರು 8-10 ವರ್ಷಗಳ ಹಿಂದೆ ಬೆಳ್ಳುಳ್ಳಿ 15 ರಿಂದ 20 ಸಾವಿರ ರೂ.ಗೆ ಮಾರಾಟವಾಗಿತ್ತು. ಆದರೆ, ಕಳೆದು 10 ವರ್ಷಗಳ ಅವಧಿಯಲ್ಲಿ ಬೆಲೆ ಕಡಿಮೆಯಾಗಿತ್ತು. ಈ ವರ್ಷ 15 ರಿಂದ 20 ಸಾವಿರ ರೂಪಾಯಿಗೆ ಬೆಳ್ಳುಳ್ಳಿ ಮಾರಾಟವಾಗುತ್ತಿದೆ. ಕನಿಷ್ಟ 27 ಸಾವಿರದಿಂದ ಗರಿಷ್ಟ 32,500 ಸಾವಿರ ರೂ. ವರೆಗೂ ಬೆಳ್ಳುಳ್ಳಿ ಮಾರಾಟವಾಗಿದೆ.
ದಾವಣಗೆರೆ ಎಪಿಎಂಸಿಗೆ ಬಸವನಬಾಗೇವಾಡಿ ಚಿಂಚೋಳಿ ಮೊದಲಾದ ಕಡೆಗಳಿಂದ ಬೆಳ್ಳುಳ್ಳಿ ಮಾರಾಟಕ್ಕೆ ಬರುತ್ತದೆ. ಯುವ ರೈತ ಹೊನ್ನಪ್ಪಗೌಡ ಅವರು ಕ್ವಿಂಟಾಲ್ ಗೆ 27ರಿಂದ 32,500 ರೂ. ವರೆಗೆ ಬೆಳ್ಳುಳ್ಳಿ ಮಾರಾಟ ಮಾಡಿದ್ದು, ಉತ್ತಮ ಆದಾಯ ಗಳಿಸಿದ್ದಾರೆ.
ಚಿಲ್ಲರೆ ಮಾರುಕಟ್ಟೆಯಲ್ಲಿ ನಾಟಿ ಬೆಳ್ಳುಳ್ಳಿ ದರ ಕೆಜಿಗೆ 400 ರೂಪಾಯಿ, ಹೈಬ್ರೀಡ್ ಬೆಳ್ಳುಳ್ಳಿ ಕೆಜಿಗೆ 300 ರೂ. ದಾಟಿದೆ. ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.