ಯತಿರಾಜ್ ನಿರ್ದೇಶನದ ಸಂಜು ಚಿತ್ರದ ‘ಮತ್ತೆ ಮತ್ತೆ ಮಿಡಿಯದೆ’ ಎಂಬ ಮೆಲೋಡಿ ಹಾಡು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ.
ಸ್ಯಾಂಡಲ್ ವುಡ್ ನ ಖ್ಯಾತ ಗಾಯಕರಾದ ವಾಸುಕಿ ವೈಭವ್ ಹಾಗೂ ಐಶ್ವರ್ಯ ರಂಗರಾಜನ್ ಈ ಹಾಡಿಗೆ ಧ್ವನಿಯಾಗಿದ್ದು, ವಿಜಯ್ ಸಂಗೀತ ಸಂಯೋಜನೆ ನೀಡಿದ್ದಾರೆ. ಇನ್ನುಳಿದಂತೆ ಆಕಾಶ ಹಸನ್ ಸಾಹಿತ್ಯವಿದೆ.
ರೋಮ್ಯಾಂಟಿಕ್ ಲವ್ ಸ್ಟೋರಿ ಕಥಾಧಾರಿತ ಈ ಚಿತ್ರದಲ್ಲಿ ಮನ್ವಿತ್, ಶ್ರಾವ್ಯ, ಹಾಗೂ ಸಂಗೀತ ಪ್ರಮುಖ ಪಾತ್ರದಲ್ಲಿದ್ದು, ದಿಶಾ ಎಂಟರ್ಪ್ರೈಸಸ್ ಬ್ಯಾನರ್ ನಡಿ ಸಂತೋಷ್ ಮಹದೇವಪ್ಪ ನಿರ್ಮಾಣ ಮಾಡಿದ್ದಾರೆ. ಸಂಜೀವ್ ರೆಡ್ಡಿ ಸಂಕಲನ ಹಾಗೂ ವಿದ್ಯಾ ನಾಗೇಶ್ ಛಾಯಾಗ್ರಾಣವಿದೆ.