ಬೆಳಗಾವಿ: ಚಲಿಸುತ್ತಿದ್ದ ರೈಲಿನಿಂದ ಏಕಾಏಕಿ ಜಿಗಿದ ಯುವಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಘಟಪ್ರಭಾ ರೈಲು ನಿಲ್ದಾಣದ ಮೊದಲ ಗೆಟ್ ಬಳಿ ನಡೆದಿದೆ.
18 ವರ್ಷದ ವಿಠ್ಠಲ್ ಗುಜನಟ್ಟಿ ರೈಲಿನಿಂದ ಜಿಗಿಯಲು ಹೋಗಿ ಗಂಭಿರವಾಗಿ ಗಾಯಗೊಂಡಿರುವ ಯುವಕ. ರಾಣಿ ಚೆನ್ನಮ್ಮ ಎಕ್ಸ್ ಪ್ರೆಸ್ ರೈಲಿನಲ್ಲಿ ಬೆಳಗಾವಿಯಿಂದ ಘಟಪ್ರಭಾಗೆ ತೆರಳುತ್ತಿದ್ದ ಯುವಕನಿಗೆ ರೈಲು ಹತ್ತಿ ಕುಳಿತುಕೊಳ್ಳುತ್ತಿದ್ದಂತೆ ನಿದ್ದೆ ಆವರಿಸಿದೆ. ಎಚ್ಚರಗೊಂಡಾಗ ರೈಲು ಘಟಪ್ರಭಾ ರೈಲು ನಿಲ್ದಾಣದಿಂದ ಮುಂದೆ ಸಾಗಿದೆ. ಗಾಬರಿಯಲ್ಲಿ ಯುವಕ ಯೋಚಿಸದೇ ರೈಲಿನಿಂದ ಜಿಗಿದೇ ಬಿಟ್ಟಿದ್ದಾನೆ.
ಚಲಿಸುತ್ತಿದ್ದ ರೈಲಿನಿಂದ ಬಿದ್ದ ರಭಸಕ್ಕೆ ಯುವಕ ಗಂಭಿರವಾಗಿ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿ ತಲುಪಿದ್ದಾನೆ. ಸ್ಥಳೀಯರು ಹಾಗೂ ಕುಟುಂಬದವರು ಯುವಕನನ್ನು ಗೋಕಾಕ್ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟಪ್ರಭಾ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.