alex Certify ಈ ಕಾರಣಕ್ಕೆ 165 ಕೋಟಿ ಬೆಲೆಬಾಳುವ ಮನೆಯನ್ನೇ ತೊರೆದಿದ್ದಾರೆ ಪ್ರಿಯಾಂಕಾ ಚೋಪ್ರಾ – ನಿಕ್‌ ಜೋನಸ್‌ ದಂಪತಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕೆ 165 ಕೋಟಿ ಬೆಲೆಬಾಳುವ ಮನೆಯನ್ನೇ ತೊರೆದಿದ್ದಾರೆ ಪ್ರಿಯಾಂಕಾ ಚೋಪ್ರಾ – ನಿಕ್‌ ಜೋನಸ್‌ ದಂಪತಿ….!

ಹಾಲಿವುಡ್‌ನ ಜನಪ್ರಿಯ ಜೋಡಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ತಮ್ಮ ಕನಸಿನ ಲಾಸ್ ಏಂಜಲೀಸ್ ಮನೆಯನ್ನು ತೊರೆದಿದ್ದಾರೆ. ಸುಮಾರು 165 ಕೋಟಿ ಬೆಲೆಬಾಳುವ ಈ ಮನೆಯ ಗೋಡೆಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ವಿಪರೀತ ತೇವದಿಂದಾಗಿ ಇನ್ನು ಆ ಮನೆಯಲ್ಲಿ ವಾಸಿಸುವುದು ಅಸಾಧ್ಯವೆನಿಸಿತ್ತು. ಸದ್ಯ ನಿಕ್‌ ಹಾಗೂ ಪ್ರಿಯಾಂಕಾ ದಂಪತಿ ಮನೆಯ ಹಿಂದಿನ ಮಾಲೀಕರ ವಿರುದ್ಧ ಕಾನೂನು ಹೋರಾಟ ನಡೆಸುತ್ತಿದ್ದಾರೆ.

2019ರಲ್ಲಿ 20 ಮಿಲಿಯನ್ ಡಾಲರ್‌ ಅಂದರೆ ಸುಮಾರು 165 ಕೋಟಿ ರೂಪಾಯಿ ಕೊಟ್ಟು ಈ ಮನೆಯನ್ನು ಪ್ರಿಯಾಂಕಾ ಚೋಪ್ರಾ ಖರೀದಿಸಿದ್ದರು. ಈ ಐಷಾರಾಮಿ ಮನೆಯಲ್ಲಿ 7 ಮಲಗುವ ಕೋಣೆಗಳು, 9 ಸ್ನಾನಗೃಹಗಳು, ಬಾಣಸಿಗರ ಅಡುಗೆಮನೆ, ಹೋಮ್ ಥಿಯೇಟರ್, ಬೌಲಿಂಗ್ ವಿಭಾಗ, ಸ್ಪಾ ಮತ್ತು ಸ್ಟೀಮ್ ಶವರ್, ಜಿಮ್ ಮತ್ತು ಬಿಲಿಯರ್ಡ್ಸ್ ಕೊಠಡಿಯಂತಹ ಸೌಲಭ್ಯಗಳಿವೆ.

ಮೇ 2023ರಲ್ಲಿ ದಾಖಲಾದ ಮೊಕದ್ದಮೆಯ ಪ್ರಕಾರ ಮನೆಯನ್ನು ಖರೀದಿಸಿದ ಸ್ವಲ್ಪ ಸಮಯದ ನಂತರ ಈಜುಕೊಳ ಮತ್ತು ಸ್ಪಾದಲ್ಲಿ ಸಮಸ್ಯೆಗಳು ಪ್ರಾರಂಭವಾದವು. ಡೆಕ್‌ನಲ್ಲಿರುವ ಬಾರ್ಬೆಕ್ಯೂ ಭಾಗಕ್ಕೆ ನೀರು ಸೋರಿಕೆಯಾಗಿತ್ತು. ಅಲ್ಲಿ ನೆಲೆಸುವುದು ಅಸಾಧ್ಯವಾಗಿದ್ದರಿಂದ ಪ್ರಿಯಾಂಕಾ ಮತ್ತು ನಿಕ್‌ ಮನೆ ಖಾಲಿ ಮಾಡಿದ್ದಾರೆ.

ಈ ಘಟನೆ ಪ್ರಿಯಾಂಕಾ ಮತ್ತು ನಿಕ್‌ ಪಾಲಿಗೆ ದುರದೃಷ್ಟಕರ. ಅಷ್ಟೇ ಅಲ್ಲ ಎಲ್ಲರಿಗೂ ಗಂಭೀರ ಎಚ್ಚರಿಕೆಯಾಗಿದೆ. ತೇವಾಂಶವು ಮನೆಗೆ ಹಾನಿಯನ್ನುಂಟುಮಾಡುತ್ತದೆ. ಆರೋಗ್ಯಕ್ಕೂ ಇದು ಅಪಾಯಕಾರಿ. ಮನೆಯನ್ನು ತೇವಾಂಶದಿಂದ ರಕ್ಷಿಸುವುದು ಬಹಳ ಮುಖ್ಯ.

ಸೀಲಿಂಗ್ ಮತ್ತು ಗೋಡೆಗಳನ್ನು ಪರಿಶೀಲಿಸಿ

ಸೀಲಿಂಗ್‌ ಮತ್ತು ಗೋಡೆಯಲ್ಲಿ ಯಾವುದೇ ಬಿರುಕು ಅಥವಾ ಸೋರಿಕೆಯಾಗಿದೆಯೇ ಎಂಬುದನ್ನು ಆಗಾಗ ಪರಿಶೀಲಿಸುತ್ತಿರಿ. ಅವುಗಳನ್ನು ಆದಷ್ಟು ಬೇಗ ಸರಿಪಡಿಸಿ.

ವಾತಾಯನ ನಿರ್ವಹಿಸಿ

ಮನೆಯಲ್ಲಿ ಉತ್ತಮ ಗಾಳಿಯ ಪ್ರಸರಣವನ್ನು ಕಾಪಾಡಿಕೊಳ್ಳಿ. ಇದಕ್ಕಾಗಿ ಕಿಟಕಿಗಳು ಮತ್ತು ಬಾಗಿಲುಗಳನ್ನು ತೆರೆಯಿರಿ. ಫ್ಯಾನ್ ಅಥವಾ ಎಕ್ಸಾಸ್ಟ್ ಫ್ಯಾನ್‌ಗಳನ್ನು ಬಳಸಿ. ಬಾತ್ರೂಮ್ ಮತ್ತು ಅಡುಗೆಮನೆಯಲ್ಲಿ ಗಾಳಿಯ ಪ್ರಸರಣ ಇರಬೇಕು.

ಡಿಹ್ಯೂಮಿಡಿಫೈಯರ್‌ ಬಳಕೆ

ಮನೆಯಲ್ಲಿ ಡಿಹ್ಯೂಮಿಡಿಫೈಯರ್ ಬಳಸಿ. ಈ ಸಾಧನಗಳು ಗಾಳಿಯಿಂದ ಹೆಚ್ಚಿನ ತೇವಾಂಶವನ್ನು ಹೀರಿಕೊಳ್ಳುತ್ತವೆ.

ಗಿಡಗಳನ್ನು ಒಳಗೆ ಇಡಬೇಡಿ

ಹೆಚ್ಚಿನ ತೇವಾಂಶವನ್ನು ಹೊರಸೂಸುವ ಸಸ್ಯಗಳನ್ನು ಮನೆಯೊಳಗೆ ಇಡಬೇಡಿ. ಅಡುಗೆ ಮಾಡುವಾಗ ಯಾವಾಗಲೂ ಎಕ್ಸಾಸ್ಟ್ ಫ್ಯಾನ್ ಅನ್ನು ಚಲಾಯಿಸಿ. ಇದರಿಂದ ಅಡುಗೆಯ ಉಗಿ ಹೊರಹೋಗುತ್ತದೆ.

ಒಳಗೆ ಬಟ್ಟೆ ಒಣಗಿಸಬೇಡಿ

ಬಟ್ಟೆಗಳನ್ನು ಮನೆಯೊಳಗೆ ಒಣಗಿಸಬೇಡಿ. ಇದಕ್ಕಾಗಿ ಬಾಲ್ಕನಿ ಅಥವಾ ಇನ್ನಾವುದೇ ಸ್ಥಳವನ್ನು ಬಳಸಿ.

ಏರ್ ಕಂಡಿಷನರ್ ಬಳಸಿ

ಏರ್‌ ಕಂಡಿಷನರ್‌ ಗಾಳಿಯನ್ನು ತಂಪಾಗಿಸುವುದರ ಜೊತೆಗೆ ತೇವಾಂಶವನ್ನು ಕಡಿಮೆ ಮಾಡುತ್ತದೆ. ಈ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಮನೆಯನ್ನು ತೇವಾಂಶದಿಂದ ರಕ್ಷಿಸಬಹುದು ಮತ್ತು ಆರೋಗ್ಯಕರ ವಾತಾವರಣವನ್ನು ಕಾಪಾಡಿಕೊಳ್ಳಬಹುದು.

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...