alex Certify ವ್ಯಾಯಾಮಕ್ಕೆ ಯಾವುದು ಬೆಸ್ಟ್ ಟೈಂ ? ಇಲ್ಲಿದೆ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವ್ಯಾಯಾಮಕ್ಕೆ ಯಾವುದು ಬೆಸ್ಟ್ ಟೈಂ ? ಇಲ್ಲಿದೆ ಟಿಪ್ಸ್

ವರ್ಕ್‌ ಔಟ್‌ ದೈಹಿಕವಾಗಿ ಹಾಗೂ ಮಾನಸಿಕವಾಗಿ ನಿಮ್ಮನ್ನು ಫಿಟ್‌ ಮಾಡುತ್ತದೆ. ಹಾಗಾಗಿ ಪ್ರತಿಯೊಬ್ಬರೂ ನಿಯಮಿತವಾಗಿ ವರ್ಕ್‌ ಔಟ್‌ ಮಾಡ್ಬೇಕು ಎಂದು ವೈದ್ಯರು ಕೂಡ ಸಲಹೆ ನೀಡ್ತಾರೆ. ವ್ಯಾಯಾಮ ಮಾಡೋದು ಸರಿ, ಆದ್ರೆ ಯಾವಾಗ ಮಾಡಬೇಕು ಎನ್ನುವ ಪ್ರಶ್ನೆ ಅನೇಕರನ್ನು ಕಾಡೋದಿದೆ.‌

ವ್ಯಾಯಾಮ ಮಾಡಲು ಬೆಳಿಗ್ಗೆ ಇಲ್ಲ ಸಂಜೆ ಇದ್ರಲ್ಲಿ ಯಾವುದು ಬೆಸ್ಟ್‌ ಎಂಬ ಪ್ರಶ್ನೆಗೆ ಹತ್ತಾರು ವರ್ಷಗಳಿಂದ ವ್ಯಾಯಾಮ ಮಾಡುತ್ತಿರುವವರಿಗೂ ತಿಳಿದಿಲ್ಲ. ಕೆಲವರು ಬೆಳಗಿನ ಜಾವ ವ್ಯಾಯಾಮ ಮಾಡಿದ್ರೆ ಮತ್ತೆ ಕೆಲವರು ಮಧ್ಯಾಹ್ನ 12 ಗಂಟೆಗೆ ಮಾಡ್ತಾರೆ. ಇನ್ನು ಕೆಲವರು ಸಂಜೆ 8 ಗಂಟೆ ನಂತ್ರ ಮಾಡ್ತಾರೆ.

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ವರ್ಕ್‌ ಔಟ್‌ ಮಾಡೋದು ಬಹಳ ಒಳ್ಳೆಯದು. ಕೊಬ್ಬನ್ನು ತೊಡೆದುಹಾಕಲು ಇದು ಉತ್ತಮ ಮಾರ್ಗವಾಗಿದೆ. ಬೆಳಿಗ್ಗೆ ವ್ಯಾಯಾಮ ಮಾಡುವುದರಿಂದ ದಿನವಿಡೀ ಹಸಿವು ಕಡಿಮೆಯಾಗುತ್ತದೆ. ಬೆಳಿಗ್ಗೆ 7 ಗಂಟೆಗೆ ವ್ಯಾಯಾಮ ಮಾಡುವುದರಿಂದ ದೇಹವು ಬೇಗನೆ ಕೆಲಸ ಮಾಡಲು ಪ್ರಾರಂಭಿಸುತ್ತದೆ. ಬೆಳಿಗ್ಗೆ ವರ್ಕ್‌ ಔಟ್‌ ಮಾಡಿದ್ರೆ ಸಂಜೆ ಬೇಗ ಸುಸ್ತಾಗುತ್ತದೆ. ಈ ಕಾರಣಕ್ಕೆ ನಾವು ಬೇಗ ಮಲಗುತ್ತೇವೆ. ಆಗ ದೇಹಕ್ಕೆ ಸಂಪೂರ್ಣ ವಿಶ್ರಾಂತಿ ಸಿಗುತ್ತದೆ.

ಬೆಳಿಗ್ಗೆ ವ್ಯಾಯಾಮ ಮಾಡುವುದು ಬೆವರು ಹೆಚ್ಚಿನ ಪ್ರಮಾಣದಲ್ಲಿ ಬರುತ್ತದೆ. ಇದು ಮಾನಸಿಕ ಆರೋಗ್ಯಕ್ಕೂ ಒಳ್ಳೆಯದು. ಮನಸ್ಸಿಲ್ಲದ ಮನಸ್ಸಿನಲ್ಲಿ ಬೆಳಿಗ್ಗೆ ವ್ಯಾಯಾಮ ಮಾಡಬೇಡಿ. ಇದು ಸಮಸ್ಯೆಯುಂಟು ಮಾಡಬಹುದು.

ಮಧ್ಯಾಹ್ನ ವ್ಯಾಯಾಮ ಮಾಡುವುದು ಕೂಡ ಕೆಟ್ಟದ್ದಲ್ಲ. ಇದು ನಿಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ. ಮಧ್ಯಾಹ್ನ ಸ್ವಲ್ಪ ನಡಿಗೆಯೂ ಪ್ರಯೋಜನಕಾರಿ. ಬೆಳಿಗ್ಗೆ ಮತ್ತು ತಡರಾತ್ರಿಗೆ ಹೋಲಿಸಿದರೆ ದೇಹವು ನೈಸರ್ಗಿಕವಾಗಿ ಮಧ್ಯಾಹ್ನ ಶೇಕಡಾ 10ರಷ್ಟು ಹೆಚ್ಚು ಕ್ಯಾಲೊರಿಗಳನ್ನು ಸುಡುತ್ತದೆ.

ಸಂಜೆ ಮಾಡುವ ತಾಲೀಮು ತುಂಬಾ ತಾಜಾತನವನ್ನು ತರುತ್ತದೆ. ವ್ಯಾಯಾಮದ ನಂತರ ನೀವು ಸ್ನಾನ ಮಾಡಿದ್ರೆ ನಿದ್ರೆ ಸರಿಯಾಗಿ ಬರುತ್ತದೆ. ಸಂಜೆಯ ವೇಳೆ ಮಾಡುವ ವ್ಯಾಯಾಮವು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಎಲ್ಲ ಸಮಯಕ್ಕಿಂತ ಬೆಳಿಗ್ಗೆ ವ್ಯಾಯಾಮ ಮಾಡೋದು ಅತ್ಯುತ್ತಮ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...