ಬೆಂಗಳೂರು : ಮದ್ಯಪ್ರಿಯರಿಗೆ ಮತ್ತೆ ಬಿಗ್ ಶಾಕ್ ಎದುರಾಗಿದ್ದು, ಅಬಕಾರಿ ಸಚಿವರು ಮತ್ತೆ ಮದ್ಯದ ದರ ಏರಿಕೆ ಸುಳಿವು ನೀಡಿದ್ದಾರೆ.
ರಾಯಚೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ತಿಮ್ಮಾಪುರ ಮದ್ಯದ ಬೆಲೆ ಏರಿಕೆ ಮಾಡುವುದರಿಂದ ಕುಡುಕರ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಸಚಿವ ತಿಮ್ಮಾಪುರ ಹೇಳಿದ್ದಾರೆ. ಸದ್ಯಕ್ಕೆ ಹೊಸ ಮದ್ಯದಂಗಡಿಗೆ ಪರವಾನಿಗೆ ನೀಡುವುದಿಲ್ಲ . ತಮಿಳುನಾಡು ಮತ್ತು ಆಂಧ್ರ ಪ್ರದೇಶಕ್ಕೆ ಹೋಲಿಕೆ ಮಾಡಿದರೇ ನಮ್ಮದು ಉತ್ತಮ ಗುಣ ಮಟ್ಟಡ ಡ್ರಿಂಕ್ಸ್, ಆಮದು ಆಗದೆ ರೀತಿ ನಾವು ತಡೆಯುತ್ತೇವೆ. ಅಕ್ರಮವಾಗಿ ಆಮದು ಮಾಡಿಕೊಂಡವರ ಮೇಲೆ ಕೇಸ್ ಹಾಕುತ್ತಿದ್ದೇವೆ ಎಂದರು. ಮದ್ಯದ ಬೆಲೆ ಏರಿಕೆ ಮಾಡುವುದರಿಂದ ಕುಡುಕರ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಸಚಿವ ತಿಮ್ಮಾಪುರ ಹೇಳಿದ್ದು, ಈ ಬಾರಿ ಬಜೆಟ್ ನಲ್ಲಿ ಮತ್ತೆ ಮದ್ಯದ ದರ ಹೆಚ್ಚಳವಾಗುವ ಸಾಧ್ಯತೆಯಿದೆ.
ಕರ್ನಾಟಕ ಸರ್ಕಾರವು ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಮತ್ತೊಮ್ಮೆ ಹೆಚ್ಚಿಸಲು ಪ್ರಸ್ತಾಪಿಸಿರುವುದಾಗಿ ವರದಿಯಾಗಿದ್ದು, ಪ್ರತಿ 650 ಮಿಲಿ ಬಿಯರ್ ಬಾಟಲಿಗೆ 8-10 ರೂ. ವರೆಗೆ ದರ ಹೆಚ್ಚಾಗಲಿದೆ ಎಂದು ಹೇಳಲಾಗಿದೆ.