ವಿಶ್ವ ಅಸ್ತಮಾ ದಿನ; ಅಸ್ತಮಾ ಖಾಯಿಲೆ ದೂರ ಮಾಡುತ್ತೆ ಮೀನಿನ ಪ್ರಸಾದ

ವಿಶ್ವ ಅಸ್ತಮಾ ದಿನದ ನಿಮಿತ್ತ ಈ ವಿಶೇಷ ಲೇಖನ.

ಹೈದ್ರಾಬಾದ್ ನಲ್ಲಿ ಅಸ್ತಮಾ ಖಾಯಿಲೆಗೆ ವಿಶಿಷ್ಟ ಮದ್ದಿದೆ. ಪ್ರತಿಬಾರಿ ಮೃಗಶಿರ ಕಾರ್ತಿ ಸಂದರ್ಭದಲ್ಲಿ ವಿಶೇಷ ಮೀನಿನ ಪ್ರಸಾದವನ್ನು ವಿತರಿಸಲಾಗುತ್ತದೆ. ಇದನ್ನು ಸೇವಿಸಿದ್ರೆ ಅಸ್ತಮಾ ರೋಗ ಸಂಪೂರ್ಣ ಗುಣವಾಗುತ್ತದೆ ಎಂಬ ನಂಬಿಕೆ ಇದೆ. ಬತ್ತನಿ ಕುಟುಂಬದವರು ಕಳೆದ 172 ವರ್ಷಗಳಿಂದ ಈ ಪ್ರಸಾದವನ್ನು ಉಚಿತವಾಗಿ ವಿತರಣೆ ಮಾಡುತ್ತಿದ್ದಾರೆ.

ದೇಶದ ದೂರ ದೂರದ ಪ್ರದೇಶಗಳಿಂದ್ಲೂ ಅಸ್ತಮಾ ರೋಗಿಗಳು ಪ್ರಸಾದ ಸ್ವೀಕರಿಸಲು ಬರುತ್ತಾರೆ. ಮೊದಲ ಬಾರಿ ಪ್ರಸಾದ ಸೇವಿಸಿದ ಮೇಲೆ ಖಾಯಿಲೆ ಸ್ವಲ್ಪ ಮಟ್ಟಿಗೆ ವಾಸಿಯಾಗಿದೆ ಎನಿಸಿದವರೆಲ್ಲ ಮತ್ತೆ ಮತ್ತೆ ಬರುತ್ತಿರುತ್ತಾರೆ.

ಇನ್ನು ಕೆಲವರು ಈ ಮೀನಿನ ಪ್ರಸಾದದ ಚಮತ್ಕಾರದ ಬಗ್ಗೆ ಕೇಳಿ ತಿಳಿದುಕೊಂಡು, ಅದರ ಅನುಭವ ಪಡೆಯಲೆಂದೇ ಬರುತ್ತಾರೆ. ಆದ್ರೆ ಎಂಥೆಂಥಾ ಔಷಧಗಳಿಂದ್ಲೂ ಗುಣವಾಗದ ಅಸ್ತಮಾ, ಕೇವಲ ಒಂದು ಪ್ರಸಾದದಿಂದ ಕಡಿಮೆಯಾಗೋದು ನಿಜಕ್ಕೂ ಪವಾಡ ಎನ್ನುತ್ತಾರೆ ಜನ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read