ಭಾರತೀಯ ಹೆದ್ದಾರಿಗಳಲ್ಲಿ ಫಾಸ್ಟ್ಟ್ಯಾಗ್ಗಳನ್ನು ಬಳಸುವ ವಾಹನ ಮಾಲೀಕರಿಗೆ ಕೆವೈಸಿ ನವೀಕರಿಸಲು ನಾಳೆ ಕೊನೆಯ ದಿನವಾಗಿದೆ. ಅಪೂರ್ಣ ಕೆವೈಸಿ ಹೊಂದಿರುವ ಎಲ್ಲಾ ಫಾಸ್ಟ್ಟ್ಯಾಗ್ಗಳನ್ನು ಜನವರಿ 31 ರ ನಂತರ ನಿಷ್ಕ್ರಿಯಗೊಳಿಸುತ್ತವೆ. ಫಾಸ್ಟ್ಯಾಗ್ ಕೆವೈಸಿಯನ್ನು ಹೇಗೆ ನವೀಕರಿಸಬಹುದು ಎಂಬುದನ್ನು ಈ ಮೂಲಕ ತಿಳಿದುಕೊಳ್ಳೋಣ.
ನಿಮ್ಮ ಫಾಸ್ಟ್ಟ್ಯಾಗ್ ಕೆವೈಸಿಯನ್ನು ಏಕೆ ನವೀಕರಿಸಬೇಕು?
ಫಾಸ್ಟ್ಟ್ಯಾಗ್ ಕೆವೈಸಿಯನ್ನು ನವೀಕರಿಸುವ ಎನ್ಎಚ್ಎಐನ ಆದೇಶವು ಟೋಲ್ ಸಂಗ್ರಹ ದಕ್ಷತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಟೋಲ್ ಪ್ಲಾಜಾಗಳಲ್ಲಿ ಸಮಯ ವ್ಯಯವಾಗುವುದನ್ನು ತಪ್ಪಿಸಲು ಸರ್ಕಾರ ಕೆಲ ವರ್ಷಗಳ ಹಿಂದೆ ಈ ಹೊಸ ವ್ಯವಸ್ಥೆ ತಂದಿದೆ. ಫಾಸ್ಟ್ಯಾಗ್ ಇದ್ದರೆ ಟೋಲ್ ಬೂತ್ಗಳ ಸಮೀಪ ಅಳವಡಿಸಿರುವ ಸ್ಕ್ಯಾನರ್ಗಳ ಮೂಲಕ ಸ್ವಯಂಚಾಲಿತವಾಗಿ ಟೋಲ್ ಹಣ ಕಡಿತಗೊಳ್ಳುತ್ತದೆ. ನಿಮ್ಮ ಫಾಸ್ಟ್ಟ್ಯಾಗ್ ಕೆವೈಸಿಯನ್ನು ನವೀಕರಿಸುವುದನ್ನು ನಿಮ್ಮ ಮನೆಯಲ್ಲಿ ಸುಲಭವಾಗಿ ಮಾಡಬಹುದು.
ಜನವರಿ 31ರೊಳಗೆ ಫಾಸ್ಟ್ಯಾಗ್ ಅಪ್ಡೇಟ್ ಮಾಡಬೇಕಿದೆ. ಈ ಕಾರ್ಯ ಆಗದಿದ್ದರೆ ಫಾಸ್ಟ್ಯಾಗ್ ಡೀ ಆ್ಯಕ್ಟಿವೇಟ್ ಆಗುತ್ತದೆ.
ಬೇಕಾಗುವ ದಾಖಲೆಗಳು : ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಮತ್ತು ವಾಹನ ನೋಂದಣಿ ಪ್ರಮಾಣಪತ್ರ.
ನವೀಕರಿಸುವುದು ಹೇಗೆ?
• ಫಾಸ್ಟ್ಯಾಗ್ ಪೋರ್ಟಲ್ಗೆ ಹೋಗಿ: fastag.ihmcl.com/
• ನಿಮ್ಮ ರಿಜಿಸ್ಟರ್ ಮೊಬೈಲ್ ನಂಬರ್ ಹಾಗೂ ಪಾಸ್ವರ್ಡ್ ಅಥವಾ ಒಟಿಪಿ ಬಳಸಿ ಲಾಗಿನ್ ಆಗಿ.
• ಡ್ಯಾಶ್ಬೋರ್ಡ್ನಲ್ಲಿ ಮೈ ಪ್ರೊಫೈಲ್ ಅನ್ನು ಆಯ್ಕೆ ಮಾಡಿ.ಇದರಲ್ಲಿ ನೀವು ಹಿಂದೆ ನೊಂದಾಯಿಸುವಾಗ ಸಲ್ಲಿಸಿದ್ದ ನಿಮ್ಮ ಕೆವೈಸಿ ವಿವರವನ್ನು ಕಾಣಬಹುದು.
• ಕೆವೈಸಿ ಮೇಲೆ ಕ್ಲಿಕ್ ಮಾಡಿ ‘ಕಸ್ಟಮರ್ ಟೈಪ್’ ಅನ್ನು ಆಯ್ಕೆ ಮಾಡಿ
• ಎಲ್ಲಾ ವಿವರ ಭರ್ತಿ ಮಾಡಿ. ಆಧಾರ್ ಇತ್ಯಾದಿ ಐಡಿ ಫ್ರೂಫ್ ಸಲ್ಲಿಸಿ.
ಫಾಸ್ಟ್ಟ್ಯಾಗ್ ಕೆವೈಸಿಯನ್ನು ಆಫ್ ಲೈನ್ ನಲ್ಲಿ ನವೀಕರಿಸುವುದು ಹೇಗೆ?
ಬ್ಯಾಂಕ್ ಶಾಖೆಗೆ ಭೇಟಿ ನೀಡಿ: ನಿಮ್ಮ ಫಾಸ್ಟ್ಟ್ಯಾಗ್ ನೀಡಲಾದ ಶಾಖೆಗೆ ಹೋಗಿ.
ಕೆವೈಸಿ ಫಾರ್ಮ್ ಅನ್ನು ಪೂರ್ಣಗೊಳಿಸಿ: ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ಅಗತ್ಯ ದಾಖಲೆಗಳ ಪ್ರತಿಗಳನ್ನು ಲಗತ್ತಿಸಿ.
ಪರಿಶೀಲನೆಗಾಗಿ ಸಲ್ಲಿಸಿ ಮತ್ತು ಕಾಯಿರಿ: ನಿಮ್ಮ ಫಾಸ್ಟ್ಟ್ಯಾಗ್ ಅನ್ನು ಪರಿಶೀಲಿಸಲು ಮತ್ತು ನವೀಕರಿಸಲು ಬ್ಯಾಂಕಿಗೆ ನಿಮ್ಮ ಫಾರ್ಮ್ ಅನ್ನು ಹಸ್ತಾಂತರಿಸಿ.
ಸಹಾಯ ಬೇಕೇ? ಎನ್ಎಚ್ಎಐ ಸಹಾಯವಾಣಿ ಇಲ್ಲಿದೆ
ನೀವು ಯಾವುದೇ ಸಮಸ್ಯೆಗಳನ್ನು ಎದುರಿಸಿದರೆ, ಮಾರ್ಗದರ್ಶನಕ್ಕಾಗಿ ಎನ್ಎಚ್ಎಐ ಸಹಾಯವಾಣಿ 1033 ಅನ್ನು ಸಂಪರ್ಕಿಸಲು ಹಿಂಜರಿಯಬೇಡಿ. ನೆನಪಿಡಿ, ಕನಿಷ್ಠ ಫಾಸ್ಟ್ಟ್ಯಾಗ್ ರೀಚಾರ್ಜ್ ಮೊತ್ತ 100 ರೂ., ಸಂಪೂರ್ಣವಾಗಿ ಪರಿಶೀಲಿಸಿದ ಖಾತೆಗಳಿಗೆ ಗರಿಷ್ಠ ಮಿತಿ 1 ಲಕ್ಷ ರೂ.