ಶಿವಮೊಗ್ಗ : ಮೂತ್ರ ವಿಸರ್ಜನೆಗೆ ಹೋದ ವ್ಯಕ್ತಿಯ ಮೇಲೆ ಸಿಮೆಂಟ್ ಸ್ಲ್ಯಾಬ್ ಬಿದ್ದು ಸ್ಥಳದಲ್ಲೇ ವ್ಯಕ್ತಿ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆಯ ವಿನೋಬನಗರದ 3 ನೇ ಕ್ರಾಸ್ ರೈಲ್ವೇ ಟ್ರ್ಯಾಕ್ ಬಳಿ ನಡೆದಿದೆ.
ಮೃತರನ್ನು ಮುತ್ತಪ್ಪ (42) ಎಂದು ಗುರುತಿಸಲಾಗಿದೆ. ಮುತ್ತಪ್ಪ, ಮೂತ್ರ ವಿಸರ್ಜನೆಗೆಂದು ಹೋದಾಗ ಏಕಾಏಕಿ ಚರಂಡಿಯ ಸ್ಲ್ಯಾಬ್ ಕುಸಿದು ಬಿದ್ದಿದೆ. 10 ಅಡಿ ಆಳದ ಚರಂಡಿಗೆ ಬಿದ್ದ ಮುತ್ತಪ್ಪ ಮೇಲೆ ಕಾಂಕ್ರೀಟ್ ಸ್ಲ್ಯಾಬ್ ಮೈಮೇಲೆ ಬಿದ್ದಿದೆ. ಕಳಪೆ ಕಾಮಗಾರಿಯಿಂದ ಈ ದುರ್ಘಟನೆ ನಡೆದಿದೆ ಎಂದು ಆರೋಪಿಸಲಾಗಿದ್ದು, ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.