ನವದೆಹಲಿ: ಭಾರತೀಯ ಉನ್ನತ ಶಿಕ್ಷಣ ಸಂಸ್ಥೆಗಳಿಗೆ (HEI) ಗ್ರೇಡಿಂಗ್ ವ್ಯವಸ್ಥೆಯನ್ನು ರದ್ದುಪಡಿಸಲಾಗಿದೆ ಎಂದು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ (NAAC) ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ.
ಗ್ರೇಡಿಂಗ್ ವ್ಯವಸ್ಥೆ ಬದಲಾಗಿ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳನ್ನು “ಮಾನ್ಯತೆ ಪಡೆದ” ಅಥವಾ “ಇನ್ನೂ ಮಾನ್ಯತೆ ಪಡೆಯದ” ಎಂದು ಟ್ಯಾಗ್ ಮಾಡುವ ಮೂಲಕ ಬೈನರಿ ಮಾನ್ಯತೆ ಪ್ರಕ್ರಿಯೆಯನ್ನು ಆರಿಸಿಕೊಂಡಿದೆ.
ಶನಿವಾರ ನಡೆದ ನ್ಯಾಕ್ ಕಾರ್ಯಕಾರಿ ಮಂಡಳಿ ಸಭೆಯ ನಂತರ, ಹೊಸ ಸುಧಾರಣೆಗಳನ್ನು ಎರಡು ಹಂತಗಳಲ್ಲಿ ಜಾರಿಗೆ ತರಲು ನಿರ್ಧರಿಸಲಾಯಿತು. ಬೈನರಿ ಮಾನ್ಯತೆ (ಮಾನ್ಯತೆ ಪಡೆದ ಅಥವಾ ಮಾನ್ಯತೆ ಪಡೆದಿಲ್ಲ) ವ್ಯವಸ್ಥೆಯು ಮುಂದಿನ ನಾಲ್ಕು ತಿಂಗಳವರೆಗೆ ಜಾರಿಗೆ ಬರಲಿದೆ ಮತ್ತು ಮೆಚ್ಯೂರಿಟಿ ಆಧಾರಿತ ಗ್ರೇಡೆಡ್ ಅಕ್ರೆಡಿಟೇಶನ್ (ಹಂತಗಳು 1 ರಿಂದ 5) ಡಿಸೆಂಬರ್ ವೇಳೆಗೆ ಜಾರಿಗೆ ಬರಲಿದೆ.
ಮೆಚ್ಯೂರಿಟಿ ಬೇಸ್ಡ್ ಗ್ರೇಡೆಡ್ ಅಕ್ರೆಡಿಟೇಶನ್ ಅಡಿಯಲ್ಲಿ, ಮಾನ್ಯತೆ ಪಡೆದ ಸಂಸ್ಥೆಗಳಿಗೆ ಉನ್ನತ ಮಟ್ಟವನ್ನು ಸಾಧಿಸಲು ಪ್ರೋತ್ಸಾಹಿಸಲು ಒಂದರಿಂದ ಐದು ಹಂತಗಳವರೆಗೆ ನೀಡಲಾಗುವುದು.
ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣ ಸೃಷ್ಟಿಸಲು ಎಲ್ಲಾ ಸಂಸ್ಥೆಗಳನ್ನು ಪ್ರೋತ್ಸಾಹಿಸಲು ಗ್ರೇಡ್ಗಳ ಬದಲು ಬೈನರಿ ಮಾನ್ಯತೆ (ಮಾನ್ಯತೆ ಪಡೆದ ಅಥವಾ ಮಾನ್ಯತೆ ಪಡೆದಿಲ್ಲ) ಇರುತ್ತದೆ ಎಂದು ಶಿಕ್ಷಣ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.