ಬೆಂಗಳೂರು: ಜಾತಿಗಣತಿ ವರದಿ ವಿಚಾರವಾಗಿ ಕಾಂತರಾಜು ವರದಿಯೇ ಅವೈಜ್ಞಾನಿಕ ಎಂದು ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಜನವರಿ ಅಂತ್ಯಕ್ಕೆ ಕಾಂತರಾಜು ವರದಿ ಸ್ವೀಕಾರ ವಿಚಾರವಾಗಿ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ಕಾಂತರಾಜು ವರದಿ ಅವೈಜ್ಞಾನಿಕವಾಗಿದೆ. ಜಾತಿ ಗಣತಿ ವರದಿಯಲ್ಲಿ ಸಹಿಯಿಲ್ಲ, ಮೂಲ ಪ್ರತಿ ಕಳೆದು ಹೋಗಿದೆ. ಇದು ಸಿದ್ದರಾಮಯ್ಯ ಪ್ರೇರಿತ, ಅವರು ಹೇಳಿ ಬರೆಸಿರುವ ವರದಿಯಾಗಿದೆ ಎಂದು ಆರೋಪಿಸಿದ್ದಾರೆ.
ಲಿಂಗಾಯಿತ ಸಮುದಾಯವನ್ನು ಒಡೆದವರು ಅವರೇ. ವೀರಶೈವ ವಿರೋಧಿ ಎರಡೂ ಭಾಗಿ ಮಾಡಿದ್ದೂ ಅವರೇ. ಇದೀಗ ಸಿಎಂ ಸಿದ್ದರಾಮಯ್ಯ ಒಕ್ಕಲಿಗರನ್ನು ಒಡೆಯೋಕೆ ಹೋಗುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕಾಂತರಾಜು ವರದಿ ವಿರುದ್ಧ ಡಿಸಿಎಂ ಸಹಿ ಹಾಕಿದ್ದಾರೆ. ಇನ್ನೋರ್ವ ಒಕ್ಕಲಿಗ ಸಚಿವರು ಕೂಡ ಸಹಿ ಹಾಕಿದ್ದಾರೆ. ವರದಿ ಬಗ್ಗೆ ಸರ್ಕಾರದಲ್ಲಿಯೇ ವಿರೋಧವಿದೆ. ಅವರನ್ನು ಕ್ಯಾಬಿನೇಟ್ ನಿಂದ ಹೊರಗೆ ಇಡಬೇಕು. ಇಲ್ಲ ಸಿದ್ದರಾಮಯ್ಯನವರೇ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.