BIG NEWS: ತಂದೆಯನ್ನೇ ಕೊಲೆಗೈದ ಮಗ-ಸೊಸೆ; ನಾಲ್ವರು ಆರೋಪಿಗಳು ಅರೆಸ್ಟ್

ಬಾಗಲಕೋಟೆ: ಆಸ್ತಿ ಆಸೆಗಾಗಿ ಮಗ ಹಾಗೂ ಸೊಸೆ ಸೇರಿ ಸುಪಾರಿ ಕೊಟ್ಟು ತಂದೆಯನ್ನು ಕೊಲೆ ಮಡಿರುವ ಘಟನೆ ಬಾಗಲಕೋಟೆಯ ತಿಮ್ಮಾಪುರ ಗ್ರಾಮದಲ್ಲಿ ನಡೆದಿದೆ.

ಚೆನ್ನಪ್ಪ (68) ಕೊಲೆಯಾದ ದುರ್ದೈವಿ. 37 ಎಕರೆ ಜಮೀನು ಭಾಗ ಮಾಡುವ ವಿಚಾರವಾಗಿ ತಂದೆ-ಮಗನ ನಡುವೆ ಗಲಾಟೆಯಾಗಿತ್ತು. ಇದೇ ವಿಚಾರವಾಗಿ ಚೆನ್ನಪ್ಪ ಮಗ ಚೆನ್ನಬಸಪ್ಪ ಹಾಗೂ ಸೊಸೆ ಶಿವಬಸವ್ವ, ಚೆನ್ನಪ್ಪನ ಸ್ನೇಹಿತ ರಮೇಶ್ ಮನಗೂಳಿ ಜೊತೆ ಸೇರಿ ಕೊಲೆ ಮಾಡಲು ಸುಪಾರಿ ನೀಡಿದ್ದಾರೆ.

ಮಾಂತೇಶ್ ಮರಡಿಮಠ ಎಂಬಾತ 3 ಲಕ್ಷ ರೂಪಾಯಿ ಸುಪಾರಿ ಪಡೆದು ಚೆನ್ನಪ್ಪನನ್ನು ಜನವರಿ 25ರಂದು ರಾಂಪುರ ಗ್ರಾಮದ ಬಳಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಅನುಮಾನಗೊಂಡ ಪೊಲಿಸರು ಮಗ ಹಾಗೂ ಸೊಸೆಯನ್ನು ವಿಚಾರಿಸಿದ್ದು, ಆರೋಪಿಗಳಾದ ಮಗ ಚೆನ್ನಬಸಪ್ಪ, ಸೊಸೆ ಶಿವಬಸವ್ವ, ರಮೇಶ್ ಹಾಗೂ ಸುಪಾರಿ ಕಿಲ್ಲರ್ ಮಾಂತೇಶ್ ಸೇರಿ ನಾಲ್ವರನ್ನು ಬಂಧಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read