ಹಿಂದೂ ಧರ್ಮದಲ್ಲಿ ರಾಮನಿಗೆ ವಿಶೇಷ ಮಹತ್ವವಿದೆ. ಅಯೋಧ್ಯೆಯಲ್ಲಿ ರಾಮಲಲಾನ ಪ್ರಾಣ ಪ್ರತಿಷ್ಠೆ ಆದಾಗಿನಿಂದ ಭಕ್ತರ ಉತ್ಸಾಹ ದುಪ್ಪಟ್ಟಾಗಿದೆ. ಸಾಮಾನ್ಯವಾಗಿ ರಾಮನ ಹೆಸರನ್ನು ನಾವು ಎರಡು ಬಾರಿ ಉಚ್ಚರಿಸುತ್ತೇವೆ. ಈಶ್ವರ, ಗಣಪತಿ, ಪಾರ್ವತಿ ಹೆಸರನ್ನು ಒಂದೇ ಬಾರಿ ಹೇಳುತ್ತೇವೆ. ರಾಮನ ಹೆಸರನ್ನು ಎರಡು ಬಾರಿ ಹೇಳುವುದರ ಹಿಂದೆ ಮಹತ್ವದ ಕಾರಣವಿದೆ.
ರಾಮನ ನಾಮವನ್ನು ನೂರಾ ಎಂಟು ಬಾರಿ ಜಪಿಸಬೇಕು ಎನ್ನಲಾಗುತ್ತದೆ. ನೀವು ಎರಡು ಬಾರಿ ರಾಮನ ಹೆಸರನ್ನು ಹೇಳಿದ್ರೆ ಅದು ನೂರಾ ಎಂಟು ಬಾರಿ ಹೇಳಿದಂತೆ ಆಗುತ್ತದೆ. ನಾವು ಲೆಕ್ಕದ ಪ್ರಕಾರ ಹೇಳೋದಾದ್ರೆ ಹಿಂದಿ ಪರಿಭಾಷೆಯ ಪ್ರಕಾರ ರ 27 ನೇ ಸ್ಥಾನದಲ್ಲಿದೆ. ಅ ಎರಡನೇ ಸ್ಥಾನದಲ್ಲಿದೆ ಮತ್ತು ಎಂ 25 ನೇ ಸ್ಥಾನದಲ್ಲಿದೆ. ಒಬ್ಬ ವ್ಯಕ್ತಿಯು ರಾಮ ಎಂದು ಹೇಳಿದಾಗ ಆ ಸಂಖ್ಯೆಯನ್ನು ಒಟ್ಟುಗೂಡಿಸಿದರೆ 27 + 2 + 25 = 54 ಆಗುತ್ತದೆ.
ಅದೇ ನೀವು ರಾಮ ಎಂದು ಎರಡು ಬಾರಿ ಹೇಳಿದ್ರೆ 54 + 54 = 108 ಸಂಖ್ಯೆ ಆಗುತ್ತದೆ. ರಾಮ ರಾಮ ಎಂದರೆ ನೀವು 108 ಬಾರಿ ರಾಮನ ಹೆಸರು ಹೇಳಿದಂತೆ ಆಗುತ್ತದೆ. 108 ಬಾರಿ ರಾಮನ ಹೆಸರನ್ನು ಹೇಳಿದ ಫಲ ಪ್ರಾಪ್ತಿಯಾಗುತ್ತದೆ.