ಅಲಬಾಮಾ : ಅಮೆರಿಕದ ಅಲಬಾಮಾ ರಾಜ್ಯದಲ್ಲಿ ಕೊಲೆ ಅಪರಾಧಿ ಕೆನ್ನೆತ್ ಯುಜೀನ್ ಸ್ಮಿತ್ ನನ್ನು ಗಲ್ಲಿಗೇರಿಸಿದ್ದು, ಇದೇ ಮೊದಲ ಬಾರಿಗೆ ಮರಣದಂಡನೆ ವಿಧಾನವಾಗಿ ಸಾರಜನಕ ಅನಿಲವನ್ನು ಮೊದಲ ಬಾರಿಗೆ ಬಳಸಿದೆ. ನೈಟ್ರೋಜನ್ ಹೈಪೋಕ್ಸಿಯಾʼ ಎಂದರೆ ವ್ಯಕ್ತಿಯನ್ನು ಸಾರಜನಕ ಅನಿಲ ಬಳಸಿ ಉಸಿರುಗಟ್ಟುವಂತೆ ಮಾಡಲಾಗುತ್ತದೆ.
ಇದೇ ಮೊದಲ ಬಾರಿಗೆ ಕೆನ್ನೆತ್ ಯುಜೀನ್ ಸ್ಮಿತ್ ಎಂಬ ಕೊಲೆ ಅಪರಾಧಿಯನ್ನು ಅಲಬಾಮಾದ ಹಾಲ್ಮನ್ ಜೈಲಿನಲ್ಲಿ ನೈಟ್ರೋಜನ್ ಹೈಪೋಕ್ಸಿಯಾದ ಮೂಲಕ ಕೊಲ್ಲಲಾಗಿದೆ. ಸ್ಮಿತ್ ಅವರ ವಕೀಲರು ಕೊನೆಯ ಕ್ಷಣದಲ್ಲಿ ಮನವಿ ಮಾಡಿದರೂ ಯುಎಸ್ ಸುಪ್ರೀಂ ಕೋರ್ಟ್ ನಿರಾಕರಿಸಿತು.
ಮರಣದಂಡನೆ ಪ್ರಕ್ರಿಯೆ ಹೇಗಿತ್ತು..?
ಮೊದಲು ಕೈದಿಗಳ ಮುಖದ ಮೇಲೆ ನೈಟ್ರೋಜನ್ ಮಾಸ್ಕ್ ಅನ್ನು ಹಾಕಲಾಗುತ್ತದೆ. ಆಮ್ಲಜನಕದ ಬದಲಿಗೆ ಶುದ್ಧ ಸಾರಜನಕವನ್ನು ವ್ಯಕ್ತಿಯ ಶ್ವಾಸಕೋಶಕ್ಕೆ ಪಂಪ್ ಮಾಡಲಾಗುತ್ತದೆ. ಸ್ಮಿತ್ನ ಸುಮಾರು 22 ನಿಮಿಷ ಒದ್ದಾಡಿ ಪ್ರಾಣ ಬಿಟ್ಟಿದ್ದಾನೆ.
1988ರ ಬಾಡಿಗೆ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕಾಗಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಕೆನ್ನೆತ್ ಸ್ಮಿತ್, ಈ ಹಿಂದೆ 2022ರಲ್ಲಿ ಮಾರಣಾಂತಿಕ ಚುಚ್ಚುಮದ್ದಿನ ಮೂಲಕ ಮರಣದಂಡನೆ ವಿಧಿಸುವ ಪ್ರಯತ್ನದಿಂದ ಬದುಕುಳಿದಿದ್ದರು. 1989ರಲ್ಲಿ ಎಲಿಜಬೆತ್ ಸೆನೆಟ್ ಎಂಬುವವರನ್ನು ಕೊಲೆ ಮಾಡಿದ ಆರೋಪದಲ್ಲಿ ಶಿಕ್ಷೆಗೆ ಗುರಿಯಾಗಿರುವ ಸ್ಮಿತ್, ಶುದ್ಧ ಸಾರಜನಕ ಅನಿಲದಿಂದ ಜಾಗತಿಕವಾಗಿ ಮರಣದಂಡನೆಗೆ ಗುರಿಯಾದ ಮೊದಲ ವ್ಯಕ್ತಿ ಎಂಬ ಕುಖ್ಯಾತಿಗೆ ಪಾತ್ರರಾಗಿದ್ದಾರೆ ಎಂದು ಮರಣದಂಡನೆ ಮಾಹಿತಿ ಕೇಂದ್ರ ತಿಳಿಸಿದೆ.