ನವದೆಹಲಿ : ಜನವರಿ 26, 2024 ರಂದು ರಾಷ್ಟ್ರವು ಗಣರಾಜ್ಯೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ, ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ (ಪಿಎಂಆರ್ಬಿಪಿ) ಗೆ ನೀಡಲಾಗುವ ಧೈರ್ಯಶಾಲಿಗಳ ಪಟ್ಟಿಯನ್ನು ಪ್ರಕಟಿಸಿದೆ. ಈ ಪ್ರಶಸ್ತಿಯು ಯುವಕರ ಅಸಾಧಾರಣ ಸಾಮರ್ಥ್ಯ ಮತ್ತು ಅತ್ಯುತ್ತಮ ಸಾಧನೆಗಳನ್ನು ಗುರುತಿಸುತ್ತದೆ.
ರಾಷ್ಟ್ರೀಯ ಬಾಲ ಪುರಸ್ಕಾರವನ್ನು 5 ರಿಂದ 18 ವರ್ಷ ವಯಸ್ಸಿನವರಿಗೆ ಏಳು ವಿಭಾಗಗಳಲ್ಲಿ ಶ್ರೇಷ್ಠತೆಗಾಗಿ ನೀಡಲಾಗುತ್ತದೆ. ಈ ವಿಭಾಗಗಳಲ್ಲಿ ಶೌರ್ಯ, ಪರಿಸರ, ಕಲೆ ಮತ್ತು ಸಂಸ್ಕೃತಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕ್ರೀಡೆ ಮತ್ತು ಸಮಾಜ ಸೇವೆ ಸೇರಿವೆ. ಪ್ರಶಸ್ತಿ ಪಡೆದವರಿಗೆ ಪ್ರಮಾಣಪತ್ರ, ಪದಕ ಮತ್ತು ಪ್ರಶಂಸಾ ಪತ್ರವನ್ನು ನೀಡಲಾಗುತ್ತದೆ.
ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಪ್ರಶಸ್ತಿ ಪುರಸ್ಕೃತರೊಂದಿಗೆ ಸಂವಾದ ನಡೆಸಿದರು. ಈ ಪ್ರಶಸ್ತಿ ವಿಜೇತರು 2024 ರ ಜನವರಿ 26 ರಂದು ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ.
ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ
1. ಆದಿತ್ಯ ವಿಜಯ್ ಬ್ರಹ್ಮಾನೆ (ಮರಣೋತ್ತರ) ಮಹಾರಾಷ್ಟ್ರ, ಶೌರ್ಯ
2.ಅನುಷ್ಕಾ ಪಾಠಕ್, ಉತ್ತರ ಪ್ರದೇಶ ಕಲೆ, ಮತ್ತು ಸಂಸ್ಕೃತಿ
3 ಅರಿಜೀತ್ ಬ್ಯಾನರ್ಜಿ, ಪಶ್ಚಿಮ ಬಂಗಾಳ, ಕಲೆ ಮತ್ತು ಸಂಸ್ಕೃತಿ
4.ಅರ್ಮಾನ್ ಉಬ್ರಾನಿ, ಛತ್ತೀಸ್ ಗಢ, ಕಲೆ ಮತ್ತು ಸಂಸ್ಕೃತಿ
5 .ಹೆಟ್ವಿ ಕಾಂತಿಭಾಯ್, ಖಿಮ್ಸೂರ್ಯ ಗುಜರಾತ್, ಕಲೆ ಮತ್ತು ಸಂಸ್ಕೃತಿ
6. ಇಶ್ಫಾಕ್ ಹಮೀದ್, ಜಮ್ಮು ಮತ್ತು ಕಾಶ್ಮೀರ, ಕಲೆ ಮತ್ತು ಸಂಸ್ಕೃತಿ
7. ಮೊಹಮ್ಮದ್ ಹುಸೇನ್, ಬಿಹಾರ್, ಕಲೆ ಮತ್ತು ಸಂಸ್ಕೃತಿ
8. ಪೆಂಡ್ಯಾಲ ಲಕ್ಷ್ಮಿ ಪ್ರಿಯಾ, ತೆಲಂಗಾಣ, ಕಲೆ ಮತ್ತು ಸಂಸ್ಕೃತಿ
9. ಸುಹಾನಿ ಚೌಹಾಣ್ ,ದೆಹಲಿ, ಇನ್ನೋವೇಶನ್
10. ಆರ್ಯನ್ ಸಿಂಗ್, ರಾಜಸ್ಥಾನ, ವಿಜ್ಞಾನ ಮತ್ತು ತಂತ್ರಜ್ಞಾನ
11. ಅವಿನಾಶ್ ತಿವಾರಿ, ಮಧ್ಯಪ್ರದೇಶ ,ಸಮಾಜ ಸೇವೆ
12. ಗರಿಮಾ ಹರಿಯಾಣ,ಸಮಾಜ ಸೇವೆ
13. ಜ್ಯೋತ್ಸ್ನಾ ಅಕ್ತರ್ ತ್ರಿಪುರಾ, ಸಮಾಜ ಸೇವೆ
14 ಸಯ್ಯಮ್ ಮಜುಂದಾರ್ ,ಅಸ್ಸಾಂ, ಸಮಾಜ ಸೇವೆ
15. ಆದಿತ್ಯ ಯಾದವ್, ಉತ್ತರ ಪ್ರದೇಶ, ಕ್ರೀಡೆ
16. ಚಾರ್ವಿ ಎ, ಕರ್ನಾಟಕ, ಕ್ರೀಡೆ
17 .ಜೆಸಿಕಾ ನೆಯಿ ಸರಿಂಗ್, ಅರುಣಾಚಲ ಪ್ರದೇಶ, ಕ್ರೀಡೆ
18. ಲಿಂಥೋಯ್ ಚನಂಬಮ್, ಮಣಿಪುರ, ಕ್ರೀಡೆ
19. ಆರ್ ಸೂರ್ಯ ಪ್ರಸಾದ್, ಆಂಧ್ರಪ್ರದೇಶ ,ಕ್ರೀಡೆ