![](https://kannadadunia.com/wp-content/uploads/2019/11/Parameshwar-High-Command_710x400xt.jpg)
ಬೆಂಗಳೂರು: ಪಿಎಸ್ಐ ಮರು ಪರೀಕ್ಷೆ ಸುಗಮವಾಗಿ ನಡೆದಿದೆ. 545 ಮತ್ತು 403 ಪಿಎಸ್ಐ ನೇಮಕಾತಿ ಬಳಿಕ ಮತ್ತೆ 660 ಪಿಎಸ್ಐ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸುವುದಾಗಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.
660 ಪಿಎಸ್ಐಗಳ ನೇಮಕಾತಿಗೆ ಆರ್ಥಿಕ ಇಲಾಖೆ ಅನುಮೋದನೆ ದೊರೆತಿದ್ದು, ಹಂತ ಹಂತವಾಗಿ ನೇಮಕಾತಿ ಮಾಡಿಕೊಳ್ಳಲಾಗುವುದು. ಮುಂದಿನ ಪಿಎಸ್ಐ ಪರೀಕ್ಷೆ ಕೆಇಎಗೆ ವಹಿಸಲಾಗುತ್ತದೆ. ಮರು ಪರೀಕ್ಷೆಯ ಮೌಲ್ಯಮಾಪನ ಆದಷ್ಟು ಶೀಘ್ರ ಮುಗಿಸಿ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಲಾಗುತ್ತದೆ. ಯಾವುದೇ ರೀತಿಯ ಅಕ್ರಮ ನಡೆದಿಲ್ಲ ಎಂದು ಹೇಳಿದ್ದಾರೆ.
ಮುಂದಿನ ಹಂತದಲ್ಲಿ 403 ಎಸ್ಐ ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗುವುದು. ನೋಟಿಫಿಕೇಶನ್ ಆಗಿ ದೇಹದಾರ್ಡ್ಯ ಪರೀಕ್ಷೆ ಪೂರ್ಣಗೊಂಡಿದೆ. ಲಿಖಿತ ಪರೀಕ್ಷೆ ಬಾಕಿ ಇದ್ದು, ಈ ಎರಡು ನೇಮಕಾತಿ ಪೂರ್ಣಗೊಂಡಲ್ಲಿ ಇಲಾಖೆಗೆ 948 ಪಿಎಸ್ಐಗಳು ಲಭ್ಯವಾಗಲಿದ್ದಾರೆ ಎಂದು ತಿಳಿಸಿದ್ದಾರೆ.