
ಬೆಂಗಳೂರು: ಲೋಕಾಯುಕ್ತ ಪೊಲೀಸ್ ಸಿಬ್ಬಂದಿ ವಿಶೇಷ ಭತ್ಯೆ ಭಾರಿ ಹೆಚ್ಚಳ ಮಾಡಲಾಗಿದೆ. ಎಸ್.ಪಿ. ಶ್ರೇಣಿ ಭತ್ಯೆ 4800 ರೂ.ನಿಂದ 8000 ರೂ.ಗೆ ಹೆಚ್ಚಳ ಮಾಡಲಾಗಿದೆ.
ಲೋಕಾಯುಕ್ತ ಸಂಸ್ಥೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ(ಐಪಿಎಸ್ ಯೇತರ) ಸೇರಿದಂತೆ ವಿವಿಧ ಹಂತದಲ್ಲಿ ಕಾರ್ಯನಿರ್ವಹಿಸುವ ಪೊಲೀಸ್ ಸಿಬ್ಬಂದಿ ವಿಶೇಷ ಭತ್ಯೆ ಪರಿಷ್ಕರಿಸಿ ಸರ್ಕಾರ ಆದೇಶ ಹೊರಡಿಸಿದೆ.
ಎಸ್.ಪಿ.(ಐಪಿಎಸ್ ಯೇತರ) ಹುದ್ದೆಗಳ ಅಧಿಕಾರಿಗಳಿಗೆ ಪ್ರಸ್ತುತ 4800 ರೂ. ಭತ್ಯೆ ಇದ್ದು, ಅದನ್ನು 8000 ರೂ.ಗೆ ಹೆಚ್ಚಳ ಮಾಡಲಾಗಿದೆ. ಡಿವೈಎಸ್ಪಿಗಳಿಗೆ 4200 ರೂ.ನಿಂದ 7000 ರೂ.ಗೆ ಹೆಚ್ಚಳ ಮಾಡಲಾಗಿದೆ.
ಪೊಲೀಸ್ ಇನ್ಸ್ಪೆಕ್ಟರ್ ಗಳಿಗೆ 3300 ಇದ್ದು, ಅದನ್ನು 6,000 ರೂ.ಗೆ ಹೆಚ್ಚಳ ಮಾಡಲಾಗಿದೆ. ಪೊಲೀಸ್ ಸಬ್ ಇನ್ಸ್ಪೆಕ್ಟರ್ಗಳಿಗೆ 3,000 ರೂ.ನಿಂದ 5000 ರೂ.ಗೆ ಭತ್ಯೆ ಹೆಚ್ಚಳ ಮಾಡಲಾಗಿದೆ. ಸಹಾಯಕ ಇನ್ಸ್ಪೆಕ್ಟರ್ ಗಳಿಗೆ 2000 ರೂ.ನಿಂದ 2200 ರೂ.ನಿಂದ 4000 ರೂ.ಗೆ, ಹೆಡ್ ಕಾನ್ಸ್ಟೇಬಲ್ ಗಳಿಗೆ 2000 ರೂ.ನಿಂದ 4000 ರೂ.ಗೆ ಭತ್ಯೆ ಪರಿಷ್ಕರಿಸಲಾಗಿದೆ. ಪೊಲೀಸ್ ಕಾನ್ಸ್ಟೇಬಲ್ ಗಳಿಗೆ 1,700 ರೂ.ನಿಂದ 4000 ರೂ.ಗೆ ಭತ್ಯೆ ಪರಿಷ್ಕರಿಸಲಾಗಿದೆ.
ರಾಜ್ಯ ಗುಪ್ತ ಇಲಾಖೆ, ಆಂತರಿಕ ಭದ್ರತಾ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಪೊಲೀಸರಿಗೆ ನೀಡುವ ವಿಶೇಷ ಭತ್ಯೆಯನ್ನು ಲೋಕಾಯುಕ್ತ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ನೀಡುತ್ತಿಲ್ಲ. ಹೀಗಾಗಿ ಲೋಕಾಯುಕ್ತ ಸಂಸ್ಥೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಪ್ರಸ್ತಾವನೆ ಪರಿಶೀಲಿಸಿ ಭತ್ಯೆ ನೀಡಲು ಸರ್ಕಾರ ಒಪ್ಪಿಗೆ ನೀಡಿದೆ.