ನವದೆಹಲಿ: 2024ನೇ ಸಾಲಿನ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಚಿತ್ರಗಳ ಪಟ್ಟಿ ಬಿಡುಗಡೆಯಾಗಿದೆ. ಭಾರತದಿಂದ ಅತ್ಯುತ್ತಮ ಡಾಕ್ಯುಮೆಂಟರಿ ಚಿತ್ರ ವಿಭಾಗಕ್ಕೆ ‘ಟು ಕಿಲ್ ಎ ಟೈಗರ್’ ಚಿತ್ರ ನಾಮನಿರ್ದೇಶನಗೊಂಡಿದೆ.
ದೌರ್ಜನ್ಯಕ್ಕೊಳಗದ ಪುತ್ರಿಗೆ ನ್ಯಾಯ ಕೊಡಿಸುವ ಹೋರಾಟದಲ್ಲಿ ತಂದೆಯ ಪಯಣ ಕುರಿತ ‘ಟು ಕಿಲ್ ಎ ಟೈಗರ್’ ಸಾಕ್ಷ್ಯ ಚಿತ್ರವನ್ನು ಕೆನಡಾ ಟೊರೆಂಟೊದಲ್ಲಿ ನೆಲೆಸಿರುವ ದೆಹಲಿ ಮೂಲದ ನಿಶಾ ಶಹೂಜಾ ನಿರ್ದೇಶಿಸಿದ್ದಾರೆ. ಭಾರತದ ಜಾರ್ಖಂಡ್ ನ ಗ್ರಾಮ ಒಂದರಲ್ಲಿ 13 ವರ್ಷದ ಮಗಳನ್ನು ಅಪಹರಿಸಿ ಲೈಂಗಿಕ ದೌರ್ಜನ್ಯವೆಸಗಿದ ಮೂವರು ಅಪರಾಧಿಗಳ ವಿರುದ್ಧ ನ್ಯಾಯಕ್ಕಾಗಿ ಹೋರಾಟ ನಡೆಸುವ ತಂದೆಯ ಕಥೆಯನ್ನು ಈ ಸಾಕ್ಷ್ಯ ಚಿತ್ರ ಒಳಗೊಂಡಿದೆ. ಕೆನಡಾ ದೇಶದ ಕೋರ್ನೆಲಿಯಾ ಪ್ರಿನ್ಸಿಪಿ ತಂಡ, ಡೇವಿಡ್ ಓಪನ್ ಹೈಮ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.
ಮಾರ್ಚ್ 10ರಂದು ಪ್ರಶಸ್ತಿ ವಿಜೇತರ ಹೆಸರು ಪ್ರಕಟವಾಗಲಿದೆ. ಹಾಲಿವುಡ್ ನ ‘ಓಪನ್ ಹೈಮರ್’ ಚಿತ್ರ 13, ‘ಅನಾಟಮಿ ಆಫ್ ಎ ಫಾಲ್’ 5 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ.