alex Certify ಬಜೆಟ್ ಗೂ ಮುನ್ನವೇ ಚಿನ್ನ – ಬೆಳ್ಳಿ ಆಮದು ಸುಂಕದಲ್ಲಿ ಏರಿಕೆ; ಹಣಕಾಸು ಸಚಿವಾಲಯದಿಂದ ಮಹತ್ವದ ನಿರ್ಧಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಜೆಟ್ ಗೂ ಮುನ್ನವೇ ಚಿನ್ನ – ಬೆಳ್ಳಿ ಆಮದು ಸುಂಕದಲ್ಲಿ ಏರಿಕೆ; ಹಣಕಾಸು ಸಚಿವಾಲಯದಿಂದ ಮಹತ್ವದ ನಿರ್ಧಾರ

ಬಜೆಟ್‌ಗೂ ಮುನ್ನವೇ ಚಿನ್ನ ಮತ್ತು ಬೆಳ್ಳಿಯ ವಿಚಾರದಲ್ಲಿ ಹಣಕಾಸು ಸಚಿವಾಲಯ ಮಹತ್ವದ ನಿರ್ಧಾರ ಕೈಗೊಂಡಿದೆ. ಹಣಕಾಸು ಸಚಿವಾಲಯ ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕವನ್ನು ಶೇಕಡಾ 12.50 ರಿಂದ ಶೇಕಡಾ 15ಕ್ಕೆ ಹೆಚ್ಚಿಸಿದೆ.

ಚಿನ್ನ – ಬೆಳ್ಳಿ ಮಾತ್ರವಲ್ಲದೆ ಬೆಲೆಬಾಳುವ ಲೋಹಗಳಿಂದ ತಯಾರಿಸಿದ ನಾಣ್ಯಗಳ ಮೇಲಿನ ಕಸ್ಟಮ್ ಸುಂಕವನ್ನೂ ಹೆಚ್ಚಿಸಲಾಗಿದೆ. ಚಿನ್ನ ಮತ್ತು ಬೆಳ್ಳಿಯ ಆಮದು ಮೇಲಿನ ಸುಂಕದಲ್ಲಿ ಶೇಕಡಾ 10 ರಷ್ಟು ಮೂಲ ಕಸ್ಟಮ್ ಸುಂಕವಾಗಿದ್ದರೆ ಶೇಕಡಾ 5  ಕೃಷಿ ಮೂಲಸೌಕರ್ಯ ಅಭಿವೃದ್ಧಿ ಸೆಸ್ ಆಗಿದೆ. ಸರ್ಕಾರ ಎಸ್ ಡಬ್ಲ್ಯುಎಸ್ ನಲ್ಲಿ ಯಾವುದೇ ಹೆಚ್ಚಳ ಮಾಡಿಲ್ಲ.

ಆಮದು ಸುಂಕವು, ಚಿನ್ನದ ಆಭರಣಗಳಿಗೆ ಬಳಸುವ ಕೊಕ್ಕೆಗಳು, ಕ್ಲಾಸ್ಪ್‌ಗಳು, ಕ್ಲಾಂಪ್‌ಗಳು, ಪಿನ್‌ಗಳು, ಕ್ಯಾಚ್‌ಗಳು ಮತ್ತು ಸ್ಕ್ರೂಗಳ ಮೇಲೆ ಹೆಚ್ಚಾಗಿದೆ. ಇದಲ್ಲದೆ ಪ್ರೆಶಿಯಸ್ ಮೆಟಲ್ಸ್ ಕ್ಯಾಟಲಿಸ್ಟ್ ಮೇಲಿನ ಆಮದು ಸುಂಕವನ್ನೂ ಹೆಚ್ಚಿಸಲಾಗಿದೆ. ಅದನ್ನು ಶೇಕಡಾ 14.35ಕ್ಕೆ ಏರಿಕೆಯಾಗಿದೆ. ಈ ಹೊಸ ಆಮದು ಸುಂಕ ನಿನ್ನೆಯಿಂದಲೇ ಜಾರಿಗೆ ಬಂದಿದೆ.  ಕಚ್ಚಾ ಆಮದು ಹಾಗೂ ಘಟನಗಳ ಮೇಲೆ ವಿಧಿಸುವ ಆಮದಿನಲ್ಲಿ ಸಮತೋಲನವಿಲ್ಲದ ಕಾರಣ ಕೇಂದ್ರ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...