alex Certify 10 ವರ್ಷಗಳ ಹಿಂದೆ ಮರ ಕಡಿದು ಹಕ್ಕಿಗಳ ಸಾವಿಗೆ ಕಾರಣವಾದ ಪ್ರಕರಣ; ಎಫ್ಐಆರ್ ರದ್ದುಗೊಳಿಸಲು ಹೈಕೋರ್ಟ್ ನಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

10 ವರ್ಷಗಳ ಹಿಂದೆ ಮರ ಕಡಿದು ಹಕ್ಕಿಗಳ ಸಾವಿಗೆ ಕಾರಣವಾದ ಪ್ರಕರಣ; ಎಫ್ಐಆರ್ ರದ್ದುಗೊಳಿಸಲು ಹೈಕೋರ್ಟ್ ನಕಾರ

ಹಕ್ಕಿಗಳು ಗೂಡು ಕಟ್ಟುತ್ತಿದ್ದ ಮರ ಕಡಿದು ಪಕ್ಷಿಗಳ ಸಾವಿಗೆ ಕಾರಣವಾದ ಪ್ರಕರಣದಲ್ಲಿ ಆರೋಪಿ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದುಗೊಳಿಸಲು ಬಾಂಬೆ ಹೈಕೋರ್ಟ್ ನಿರಾಕರಿಸಿದೆ. ಹಕ್ಕಿಗಳು ಗೂಡು ಕಟ್ಟುತ್ತಿದ್ದ ಹುಣಸೆಮರ ಕಡಿದುಹಾಕಿ ಕೆಲವು ಪಕ್ಷಿಗಳು ಮತ್ತು ಅವುಗಳ ಮರಿಗಳು ಸಾವಿಗೆ ಕಾರಣವಾದ ಆರೋಪದ ಮೇಲೆ 2014 ರಲ್ಲಿ ಬಾಂದ್ರಾ ಸಿಎಚ್‌ಎಸ್ ಸದಸ್ಯರ ವಿರುದ್ಧದ ಎಫ್‌ಐಆರ್ ದಾಖಲಾಗಿತ್ತು.

“ಎಫ್‌ಐಆರ್‌ನಲ್ಲಿ ಆರೋಪಿಸಲಾದ ಅಪರಾಧದ ಪ್ರಕರಣವನ್ನು ನಾವು ಪರಿಗಣಿಸಿದ್ದೇವೆ. ಹೀಗಾಗಿ ಅರ್ಜಿದಾರರು ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ನ್ಯಾಯಮೂರ್ತಿಗಳಾದ ಅಜಯ್ ಗಡ್ಕರಿ ಮತ್ತು ಶ್ಯಾಮ್ ಚಂದಕ್ ಅವರು ಜನವರಿ 15ರ ಆದೇಶದಲ್ಲಿ ತಿಳಿಸಿದ್ದಾರೆ.

ಮೇ 13 , 2014 ರಂದು ಖಾರ್ ಪೊಲೀಸರು ದಾಖಲಿಸಿದ ಎಫ್‌ಐಆರ್ ಪ್ರಕಾರ ಪ್ರಾಣಿಗಳ ರಕ್ಷಣೆಗಾಗಿ ಇರುವ ಎನ್‌ಜಿಒದ ಯುವ ಸಂಘಟನೆಯ ಕಾರ್ಯಕರ್ತರು ನೀಡಿದ ದೂರಿನ ಆಧಾರದ ಮೇಲೆ ಆರೋಪಿ ವಿರುದ್ಧ ಎಫ್ ಐಆರ್ ದಾಖಲಿಸಲಾಗಿತ್ತು.

ವಲಸೆ ಹಕ್ಕಿಗಳು ಗೂಡುಕಟ್ಟುವ ಮರಗಳನ್ನು ಶೆರ್ಲಿ ರಾಜನ್ ರಸ್ತೆಯಲ್ಲಿ ನಾಶಪಡಿಸಲಾಗಿತ್ತು. ಹಿಂದಿನ ದಿನ ಬೆಳಗ್ಗೆ 11 ಗಂಟೆ ಸುಮಾರಿಗೆ ಹುಣಸೆ ಮರವನ್ನು ಕಡಿಯಲಾಗುತ್ತಿದೆ ಎಂದು ಕಾರ್ಯಕರ್ತರಿಗೆ  ಕರೆ ಬಂದಿತ್ತು. ಗೂಡು ಸಹಿತ ಸುಮಾರು 40-50 ಪಕ್ಷಿಗಳು ಬಿದ್ದಿದ್ದು, ಗಾಯಗೊಂಡ ಪಕ್ಷಿಗಳನ್ನು ಪಕ್ಕದಲ್ಲಿದ್ದ ಶಾಲೆಗೆ ಎಸೆಯಲಾಗಿತ್ತು ಎಂದು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇಬ್ಬರು ಸಿಎಚ್‌ಎಸ್ ಸದಸ್ಯರಾದ ಅಮಿತ್ ಧುತಿಯಾ ಮತ್ತು ಸನ್ನಿ ಭೂತಾನಿ ಅವರು ಮರಗಳ ಕೊಂಬೆಗಳನ್ನು ಕತ್ತರಿಸಲು ಗುತ್ತಿಗೆದಾರನಿಗೆ ಹೇಳಿದ್ದರು ಎಂದು ಎನ್ ಜಿ ಓ ಕಾರ್ಯಕರ್ತರು ಹೇಳಿದ್ದಾರೆ.

ಇಬ್ಬರ ವಿರುದ್ಧ ಐಪಿಸಿ, ವನ್ಯಜೀವಿ ಕಾಯ್ದೆ ಮತ್ತು ಮಹಾರಾಷ್ಟ್ರ ಮರಗಳ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಬಾಂದ್ರಾ ಮ್ಯಾಜಿಸ್ಟ್ರೇಟ್ ಮುಂದೆ ಆರೋಪಪಟ್ಟಿ ಸಲ್ಲಿಸಲಾಯಿತು. ಡಿಸೆಂಬರ್ 2016 ರಲ್ಲಿ ಹೈಕೋರ್ಟ್ ವಿಚಾರಣೆಗೆ ತಡೆ ನೀಡಿತು. ಆಗ ತನ್ನನ್ನು ತಪ್ಪಾಗಿ ಸಿಲುಕಿಸಲಾಗಿದೆ ಎಂದು ಧುತಿಯಾ ಹೈಕೋರ್ಟ್‌ನ ಮುಂದೆ ಪ್ರತಿಪಾದಿಸಿದ್ದರು.

ಶಾಲೆಯ ಆವರಣದಲ್ಲಿದ್ದ ಮರವನ್ನು ಕಡಿಯಲಾಗಿದ್ದು ಮರ ಕಡಿಯಲು ಧುತಿಯಾ ಅನುಮತಿ ಪಡೆದಿರಲಿಲ್ಲ ಎಂದು ಪ್ರಾಸಿಕ್ಯೂಟರ್ ಎ ಎ ಟಕಲ್ಕರ್ ಹೇಳಿದ್ದಾರೆ.

ಧುತಿಯಾ ಅವರ ಪರ ವಾದ ಮಂಡಿಸಿದ ಹಿರಿಯ ವಕೀಲ ಗಿರೀಶ್ ಕುಲಕರ್ಣಿ ಗಾಯಗೊಂಡ ಎಲ್ಲಾ ಪಕ್ಷಿಗಳನ್ನು ನಂತರ ಐರೋಲಿಯ ಅರಣ್ಯಕ್ಕೆ ಬಿಡಲಾಯಿತು . ಪೊಲೀಸರು ಗುತ್ತಿಗೆದಾರರನ್ನು ಪತ್ತೆ ಹಚ್ಚುವ ಪ್ರಯತ್ನ ಮಾಡಲಿಲ್ಲ ಎಂದು ವಾದಿಸಿದರು.

ನ್ಯಾಯಾಧೀಶರು ಸಾಕ್ಷಿಗಳ ಹೇಳಿಕೆಗಳನ್ನು ಗಮನಿಸಿ. “ಈ ಘಟನೆಯಲ್ಲಿ ಹಕ್ಕಿಗಳ ಮೊಟ್ಟೆಗಳು ಹಾಳಾಗಿವೆ ಮತ್ತು ಕೆಲವು ಪಕ್ಷಿಗಳು ಸಾವನ್ನಪ್ಪಿವೆ ಎಂದು ದಾಖಲೆ ಸೂಚಿಸುತ್ತದೆ. ಪಂಚನಾಮೆಯಲ್ಲಿ ಮರದ ಎಲ್ಲಾ ಕೊಂಬೆಗಳನ್ನು ಕತ್ತರಿಸಿರುವುದು ಸ್ಪಷ್ಟವಾಗಿ ತೋರಿಸುತ್ತದೆ. ಹೀಗಾಗಿ ಎಫ್‌ಐಆರ್ ಮತ್ತು ಸಾಕ್ಷಿಗಳ ಹೇಳಿಕೆಯನ್ನು ದೃಢೀಕರಿಸುತ್ತದೆ”ಎಂದು ಹೇಳಿದರು. ಈ ರೀತಿ ಮರವನ್ನು ಕಡಿಯುವುದು, ಮರಗಳನ್ನು ಸುಡುವುದು ಅಥವಾ ಮರವನ್ನು ಯಾವುದೇ ರೀತಿಯಲ್ಲಿ ಹಾನಿಗೊಳಿಸುವುದು ಟ್ರೀಸ್ ಆಕ್ಟ್ ಬರುತ್ತದೆ ಎಂದು ಧುತಿಯಾ ಅವರ ಮನವಿಯನ್ನು ವಜಾಗೊಳಿಸಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...