ರೆವರೆಂಡ್ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರ ನಾಲ್ಕು ಮಕ್ಕಳಲ್ಲಿ ಒಬ್ಬರಾದ ಡೆಕ್ಸ್ಟರ್ ಸ್ಕಾಟ್ ಕಿಂಗ್ ಅವರು ವಿಧಿವಶರಾದರು.
ಕ್ಯಾಲಿಫೋರ್ನಿಯಾದ ಮಾಲಿಬುನಲ್ಲಿರುವ ತಮ್ಮ ಮನೆಯಲ್ಲಿ ಅವರು ನಿಧನರಾದರು ಎಂದು ಅವರ ಪತ್ನಿ ಲೇಹ್ ವೆಬರ್ ಕಿಂಗ್ ಹೇಳಿದ್ದಾರೆ. ಅವರಿಗೆ 62 ವರ್ಷ ವಯಸ್ಸಾಗಿತ್ತು. ಅವರು ಈ ಭಯಾನಕ ಕ್ಯಾನ್ಸರ್ ಕಾಯಿಲೆಯೊಂದಿಗೆ ಕೊನೆಯವರೆಗೂ ಹೋರಾಡಿದರು. ಅವರ ಜೀವನದ ಎಲ್ಲಾ ಸವಾಲುಗಳಂತೆ, ಅವರು ಈ ಅಡೆತಡೆಯನ್ನು ಧೈರ್ಯ ಮತ್ತು ಶಕ್ತಿಯಿಂದ ಎದುರಿಸಿದರು” ಎಂದು ಅವರು ಹೇಳಿದರು.
ಡೆಕ್ಸ್ಟರ್ ಸ್ಕಾಟ್ ಕಿಂಗ್ ತಮ್ಮ ತಂದೆಯ ಪರಂಪರೆಯ ಬಗ್ಗೆ ತಮ್ಮ ಒಡಹುಟ್ಟಿದವರು ಮತ್ತು ನಾಗರಿಕ ಹಕ್ಕುಗಳ ಸಮುದಾಯದೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದರು.