ಮಗು ದಷ್ಟಪುಷ್ಠವಾಗಿ, ಬುದ್ಧಿವಂತನಾಗಿರಬೇಕೆಂದು ಎಲ್ಲಾ ಹೆತ್ತವರೂ ಬಯಸುತ್ತಾರೆ. ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಿರಲು ಮಗುವಿಗೆ ಸೂಕ್ತ ಆಹಾರವನ್ನು ಕೊಡಬೇಕು. ಆರೋಗ್ಯಕರ ಆಹಾರ ಸೇವನೆಯಿಂದ ಮಕ್ಕಳು ಸೂಕ್ಷ್ಮಮತಿಗಳಾಗುತ್ತಾರೆ. ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಉತ್ತಮ ಆಹಾರ ಪದ್ಧತಿಯನ್ನು ಹೊಂದುವುದು ಬಹಳ ಮುಖ್ಯ.
ಮಕ್ಕಳ ಆರೋಗ್ಯವು ಅವರ ಆಹಾರದ ಮೇಲೆ ಅವಲಂಬಿತವಾಗಿರುತ್ತದೆ. ಮಕ್ಕಳಿಗೆ ಖಾಲಿ ಹೊಟ್ಟೆಯಲ್ಲಿ ಕೆಲವು ಆಹಾರಗಳನ್ನು ಕೊಡುವುದರಿಂದ ಅವರು ಯಾವಾಗಲೂ ಫಿಟ್ ಆಗಿರುತ್ತಾರೆ.
ಬಾದಾಮಿ
ಫಿಟ್ ಆಗಿರಲು ಮಕ್ಕಳಿಗೆ ಯಾವಾಗಲೂ ಉತ್ತಮ ಪೋಷಣೆಯ ಅಗತ್ಯವಿದೆ. ಮಕ್ಕಳಿಗೆ ಪ್ರತಿದಿನ ಜೀವಸತ್ವಗಳು, ಖನಿಜಗಳು ಮತ್ತು ಕೊಬ್ಬಿನಿಂದ ಸಮೃದ್ಧವಾಗಿರುವ ಆಹಾರವನ್ನು ನೀಡಬೇಕು. ಮಕ್ಕಳು ಬಾದಾಮಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದ್ರೆ ದೇಹವನ್ನು ಬಲಪಡಿಸಬಹುದು.
ಸೇಬು
ಪ್ರತಿದಿನ ಸೇಬು ಹಣ್ಣನ್ನು ಸೇವಿಸುವಂತೆ ಮಕ್ಕಳನ್ನು ಪ್ರೋತ್ಸಾಹಿಸಿ. ಮಕ್ಕಳ ದೃಷ್ಟಿಯನ್ನು ಸುಧಾರಿಸಲು ಇದು ತುಂಬಾ ಉಪಯುಕ್ತವಾಗಿದೆ. ಸೇಬು ಹಣ್ಣಿನಲ್ಲಿ ಉತ್ತಮ ಪ್ರಮಾಣದ ಕ್ಯಾಲ್ಸಿಯಂ, ಕಬ್ಬಿಣ ಮತ್ತು ಸತು ಇರುತ್ತದೆ.
ಬಿಸಿನೀರು
ಮಕ್ಕಳಿಗೆ ಪ್ರತಿದಿನ ಬೆಳಗ್ಗೆ ಎದ್ದ ನಂತರ ಉಗುರುಬೆಚ್ಚನೆಯ ನೀರನ್ನು ಕುಡಿಯಲು ಕೊಡಿ. ಬಿಸಿ ನೀರು ಕುಡಿಯುವುದರಿಂದ ಎಲ್ಲಾ ರೋಗಗಳು ನಾಶವಾಗುತ್ತವೆ. ಮಗು ಒಳಗಿನಿಂದ ಸಂಪೂರ್ಣವಾಗಿ ಆರೋಗ್ಯವಾಗಿರುತ್ತದೆ.
ಬಾಳೆಹಣ್ಣು
ಮಕ್ಕಳು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿನ್ನಬೇಕು. ಹೊಟ್ಟೆಯ ಎಲ್ಲಾ ಸಮಸ್ಯೆಗಳನ್ನು ದೂರವಿಡಲು ಇದು ತುಂಬಾ ಪ್ರಯೋಜನಕಾರಿಯಾಗಿದೆ. ದುರ್ಬಲ ಮಕ್ಕಳಿಗಂತೂ ಬಾಳೆಹಣ್ಣು ವರದಾನವಿದ್ದಂತೆ.
ದಾಲ್
ಬೇಳೆಗಳು ಪ್ರೋಟೀನ್‌ನ ಉತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಪ್ರತಿದಿನ ಮಕ್ಕಳಿಗೆ ಊಟಕ್ಕೆ ದಾಲ್ ಬಡಿಸಿ. ತೂಕವನ್ನು ನಿಯಂತ್ರಣದಲ್ಲಿಡಲು ಕೂಡ ಇದು ಸಹಕಾರಿಯಾಗಿದೆ.