ನಟಿ ರಶ್ಮಿಕಾ ಮಂದಣ್ಣ ʼಡೀಪ್ ಫೇಕ್ʼ ವಿಡಿಯೋ ಆರೋಪಿ ಅರೆಸ್ಟ್

ನಟಿ ರಶ್ಮಿಕಾ ಮಂದಣ್ಣರ ಡೀಪ್‌ಫೇಕ್ ವಿಡಿಯೋಗೆ ಕಾರಣವಾಗಿದ್ದ ಆರೋಪಿಯನ್ನ ಬಂಧಿಸಲಾಗಿದೆ. ಆರೋಪಿತ ವ್ಯಕ್ತಿಯನ್ನು ಶನಿವಾರದಂದು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ರಶ್ಮಿಕಾ ಮಂದಣ್ಣರ ಡೀಪ್ ಫೇಕ್ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಬಳಿಕ ತಂತ್ರಜ್ಞಾನವನ್ನು ಮಾನಹಾನಿಗೆ, ಅಶ್ಲೀಲತೆಗೆ ಬಳಸಿದ್ದರ ಬಗ್ಗೆ ವಿರೋಧ ವ್ಯಕ್ತವಾಗಿ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕ ಕೂಗು ಕೇಳಿಬಂದಿತ್ತು.

ನಟಿಯ ಡೀಪ್‌ಫೇಕ್ ವೀಡಿಯೊದಲ್ಲಿ ಬ್ರಿಟಿಷ್-ಭಾರತೀಯ ಪ್ರಭಾವಿ ಜರಾ ಪಟೇಲ್ ಅನ್ನು ನಕಲು ಮಾಡಲಾಗಿತ್ತು. ಕಪ್ಪು ಉಡುಗೆಯಲ್ಲಿ ಲಿಫ್ಟ್ ಗೆ ಪ್ರವೇಶಿಸಿದ್ದ ಜರಾ ಪಟೇಲ್ ಮುಖವನ್ನ ರಶ್ಮಿಕಾ ಮಂದಣ್ಣಗೆ ಬದಲಾಯಿಸಿ ಹರಿಬಿಡಲಾಗಿತ್ತು. ಈ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಆಘಾತಕ್ಕೊಳಗಾಗಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು. ಡೀಪ್ ಫೇಕ್ ವಿಡಿಯೋ “ಅತ್ಯಂತ ಭಯಾನಕ” ಎಂದು ಹೇಳಿದ್ದ ಅವರು ತಂತ್ರಜ್ಞಾನದ ದುರುಪಯೋಗದಿಂದಾಗಿ ವ್ಯಕ್ತಿಗಳ ಮಾನಿ ವಿರುದ್ಧ ಆಕ್ಷೇಪಿಸಿದ್ದರು.

ಡೀಪ್‌ಫೇಕ್ ವೀಡಿಯೊ ವೈರಲ್ ಆದ ನಂತರ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಕೇಂದ್ರ ಸಲಹೆ ನೀಡಲು ಕಾರಣವಾಯಿತು. ಡೀಪ್‌ಫೇಕ್‌ಗಳಿಗೆ ಒಳಗೊಂಡಿರುವ ಕಾನೂನು ನಿಬಂಧನೆಗಳು ಮತ್ತು ಅವುಗಳ ರಚನೆ ಮತ್ತು ಪ್ರಸರಣಕ್ಕೆ ಸಂಬಂಧಿಸಿದ ಸಂಭಾವ್ಯ ದಂಡಗಳನ್ನು ಒತ್ತಿಹೇಳಿತು.

ಡೀಪ್‌ಫೇಕ್‌ಗಳು ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ರಚಿಸಲಾದ ಸಿಂಥೆಟಿಕ್ ಮಾಧ್ಯಮದ ಒಂದು ರೂಪವಾಗಿದೆ. ದೃಶ್ಯ ಮತ್ತು ಆಡಿಯೊ ಅಂಶಗಳನ್ನು ಕುಶಲತೆಯಿಂದ ನಿರ್ವಹಿಸಲು ಅತ್ಯಾಧುನಿಕ ಅಲ್ಗಾರಿದಮ್‌ಗಳನ್ನು ಬಳಸಿಕೊಳ್ಳುತ್ತದೆ. ಸೈಬರ್ ಅಪರಾಧಿಗಳಿಗೆ ವ್ಯಕ್ತಿಗಳು, ಕಂಪನಿಗಳು ಅಥವಾ ಸರ್ಕಾರಗಳ ಖ್ಯಾತಿಯನ್ನು ಅಡ್ಡಿಪಡಿಸಲು ಮತ್ತು ಹಾನಿ ಮಾಡಲು ಡೀಪ್ ಫೇಕ್ ತಂತ್ರಜ್ಞಾನ ಸಂಭಾವ್ಯ ಅಸ್ತ್ರವಾಗಿದೆ.

ರಶ್ಮಿಕಾ ಮಂದಣ್ಣ ಅಲ್ಲದೆ, ಕತ್ರಿನಾ ಕೈಫ್, ಅಮಿತಾಬ್ ಬಚ್ಚನ್, ಪ್ರಿಯಾಂಕಾ ಚೋಪ್ರಾ ಮತ್ತು ಸಚಿನ್ ತೆಂಡೂಲ್ಕರ್ ಅವರ ಡೀಪ್‌ಫೇಕ್ ವೀಡಿಯೊಗಳು ಇತ್ತೀಚಿನ ವಾರಗಳಲ್ಲಿ ಅಂತರ್ಜಾಲದಲ್ಲಿ ವೈರಲ್ ಆಗಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read