ನಾಯಿಯಿಂದ ತಪ್ಪಿಸಿಕೊಂಡು ಓಡುವ ಯತ್ನದಲ್ಲಿ ರೈಲ್ವೆ ಟ್ರಾಕ್‌ ಗೆ ಬಂದ ಮಕ್ಕಳು; ಗೂಡ್ಸ್ ರೈಲು ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವು

ದುರಂತ ಘಟನೆಯೊಂದರಲ್ಲಿ ರಾಜಸ್ತಾನದ ಜೋಧ್‌ಪುರದಲ್ಲಿ ಇಬ್ಬರು ಸೋದರಸಂಬಂಧಿಗಳು ನಾಯಿಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವಾಗ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ.

ನಗರದ ಮಾತಾ ಕ ಥಾನ್‌ನಲ್ಲಿ ಶುಕ್ರವಾರ ಈ ದುರ್ಘಟನೆ ನಡೆದಿದೆ. ಮಾಹಿತಿ ಪ್ರಕಾರ ಅನನ್ಯಾ (12) ಮತ್ತು ಯುವರಾಜ್ ಸಿಂಗ್ (14) ಗಣೇಶ್ ಪುರ ಮತ್ತು ಬನಾರ್ ನಿವಾಸಿಗಳಾಗಿದ್ದು, ಆರ್ಮಿ ಚಿಲ್ಡ್ರನ್ ಅಕಾಡೆಮಿಯಲ್ಲಿ 5 ಮತ್ತು 7 ನೇ ತರಗತಿಯಲ್ಲಿ ಓದುತ್ತಿದ್ದರು.

ಮೂವರು ಸ್ನೇಹಿತರೊಂದಿಗೆ ಅವರು ಶಾಲೆಯಿಂದ ವಾಪಸಾಗುತ್ತಿದ್ದ ವೇಳೆ ನಾಯಿಗಳು ಹಿಂಬಾಲಿಸಲು ಆರಂಭಿಸಿವೆ. ಗಾಬರಿಗೊಂಡ ಮಕ್ಕಳು ಭಯಭೀತರಾಗಿ ಓಡಲು ಆರಂಭಿಸಿದ್ದಾರೆ. ಓಡುತ್ತಿರುವಾಗ ರೈಲ್ವೇ ಟ್ರ್ಯಾಕ್ ತಲುಪಿದ ಅವರಿಗೆ ಗೂಡ್ಸ್ ರೈಲು ಡಿಕ್ಕಿ ಹೊಡೆದಿದೆ. ಪರಿಣಾಮ ಅನನ್ಯಾ ಮತ್ತು ಯುವರಾಜ್ ಸಿಂಗ್ ಸ್ಥಳದಲ್ಲೇ ಮೃತಪಟ್ಟಿದ್ದರು.

ಅಪಘಾತದ ಬಗ್ಗೆ ಮಾಹಿತಿ ಪಡೆದ ಬಾಲಕಿಯ ತಂದೆ ಪ್ರೇಮ್ ಸಿಂಗ್ ಮತ್ತು ಇತರ ಕುಟುಂಬ ಸದಸ್ಯರು ಸ್ಥಳಕ್ಕೆ ಧಾವಿಸಿದ್ದರು. ಯುವರಾಜ್ ತಂದೆ ಮದನ್ ಸಿಂಗ್ ಕರ್ನಾಟಕದಲ್ಲಿದ್ದಾರೆ. ಅಪಘಾತದ ಬಗ್ಗೆ ಅವರಿಗೆ ಕರೆ ಮಾಡಿ ಮಾಹಿತಿ ನೀಡಲಾಯಿತು. ಜೋಧ್‌ಪುರ ಮುನ್ಸಿಪಲ್ ಕಾರ್ಪೊರೇಷನ್ ತಂಡ ನಾಯಿಗಳನ್ನು ಹಿಡಿದ ನಂತರವೇ ಕುಟುಂಬ ಸದಸ್ಯರು ಶವಗಳನ್ನು ಪಡೆದುಕೊಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read