ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಹಿನ್ನೆಲೆ ದೇಶಾದ್ಯಂತ ರಾಮನ ಜಪತಪ ನಡೆಯುತ್ತಿದೆ. ಎಲ್ಲೆಡೆ ರಾಮನ ಭಜನೆಗಳು, ಹಾಡುಗಳು, ವಿಡಿಯೋ ವೈರಲ್ ಆಗುತ್ತಿದೆ.
ಇದೀಗ ಮಾನವ ಸರಪಳಿ ಮೂಲಕ ಶಾಲಾ ಮಕ್ಕಳು ರಾಮನ ಬಾಣ ಚಿತ್ರಿಸಿದ್ದಾರೆ. ಸುಂದರವಾದ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಗುಜರಾತ್ ಸೂರತ್ನಲ್ಲಿ ಸ್ವಾಮಿನಾರಾಯಣ ಗುರುಕುಲದ ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿ ರಾಮನ ಬಾಣವನ್ನು ಚಿತ್ರಿಸಿದ್ದಾರೆ.