alex Certify ವಿವಾದಾತ್ಮಕ ಬದುಕು, ನಿಗೂಢ ಸಾವು……ಜನಪ್ರಿಯತೆಯ ಜೊತೆಗೆ ವಿವಾದಕ್ಕೂ ಗುರಿಯಾಗಿದ್ದರು ಈ ಆಧ್ಯಾತ್ಮ ಗುರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿವಾದಾತ್ಮಕ ಬದುಕು, ನಿಗೂಢ ಸಾವು……ಜನಪ್ರಿಯತೆಯ ಜೊತೆಗೆ ವಿವಾದಕ್ಕೂ ಗುರಿಯಾಗಿದ್ದರು ಈ ಆಧ್ಯಾತ್ಮ ಗುರು…!

ಓಶೋ ಹೆಸರನ್ನು ಕೇಳದೇ ಇರುವವರೇ ಅಪರೂಪ. ಅವರನ್ನು ದೇವರೆಂದೇ ಪರಿಗಣಿಸುವ ಅನುಯಾಯಿಗಳಿದ್ದಾರೆ. ಅವರನ್ನು ಖಳನಾಯಕ ಎಂದು ಪರಿಗಣಿಸುವ ವಿರೋಧಿಗಳೂ ಇದ್ದಾರೆ. ಪರ – ವಿರೋಧಗಳಿಂದ ವಿಚಲಿತರಾಗದ ಓಶೋ ವಿವಾದಕ್ಕೂ ಗುರಿಯಾಗಿದ್ದರು.

ಮಧ್ಯಪ್ರದೇಶದ ರೈಸನ್ ಜಿಲ್ಲೆಯ ಕುಚ್ವಾಡ ಗ್ರಾಮದಲ್ಲಿ 11 ಡಿಸೆಂಬರ್ 1939 ರಂದು ಜೈನ ಕುಟುಂಬದಲ್ಲಿ ಜನಿಸಿದ ಓಶೋ, ಜನವರಿ 19, 1990ರಂದು ಪುಣೆಯಲ್ಲಿ ಕೊನೆಯುಸಿರೆಳೆದರು. ಅವರ ವಿವಾದಾತ್ಮಕ ಜೀವನ ಮತ್ತು ನಿಗೂಢ ಸಾವಿನ ಬಗ್ಗೆ ತಿಳಿದುಕೊಳ್ಳೋಣ.

ಚಂದ್ರಮೋಹನ್ ಜೈನ್ ʼಓಶೋʼ ಆದ ಕಥೆ

ತಂದೆ ಬಾಬುಲಾಲ್ ಮತ್ತು ತಾಯಿ ಸರಸ್ವತಿಯ 11 ಮಕ್ಕಳಲ್ಲಿ ಹಿರಿಯ ಮಗನಾದ ಓಶೋ ಅವರ ಬಾಲ್ಯದ ಹೆಸರು ಚಂದ್ರಮೋಹನ್ ಜೈನ್. ಅವರು ಏಳು ವರ್ಷ ವಯಸ್ಸಿನವರೆಗೂ ತನ್ನ ಅಜ್ಜಿಯೊಂದಿಗೆ ವಾಸಿಸುತ್ತಿದ್ದರು. ಚಂದ್ರಮೋಹನ್ ಜೈನ್, 1960ರ ದಶಕದಲ್ಲಿ ಆಚಾರ್ಯ ರಜನೀಶ್ ಮತ್ತು ಭಗವಾನ್ ರಜನೀಶ್ ಎಂದು ಪ್ರಸಿದ್ಧರಾದರು. ನಂತರ 1989 ರಲ್ಲಿ ಅವರು ಓಶೋ ಎಂದು ಪ್ರಪಂಚದಾದ್ಯಂತ ಜನಪ್ರಿಯತೆ ಗಳಿಸಿದರು. ಓಶೋ ಎಂಬುದು ಲ್ಯಾಟಿನ್ ಪದ. ಓಶೋ ಎಂದರೆ ಸಾಗರದಲ್ಲಿ ವಿಲೀನವಾಗುವುದು ಎಂದರ್ಥ. ರಜನೀಶ್‌ ಅವರ ಸಂಸ್ಥೆಗಳು ಕೂಡ ಓಶೋ ಹೆಸರಿನಲ್ಲಿ ಮುನ್ನಡೆದವು.

ಓಶೋ ಉಪನ್ಯಾಸಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಲೈಂಗಿಕತೆ ಮತ್ತು ವ್ಯಸನದ ಬಗ್ಗೆ ಅವರ ಬಹಿರಂಗ ದೃಷ್ಟಿಕೋನಗಳಿಂದ ಎಲ್ಲೆಡೆ ಗುರುತಿಸಿಕೊಂಡರು. ಅನೇಕ ಸ್ಥಳಗಳಲ್ಲಿ ಪ್ರಶಂಸೆಗೆ ಒಳಗಾದರು, ವಿವಿಧ ದೇಶಗಳಲ್ಲಿ ನಿಂದನೆಗೂ ಗುರಿಯಾಗಿದ್ದರು.

ಆದರೆ ಓಶೋ ಅವರ ಅನುಯಾಯಿಗಳು, ಶಿಷ್ಯರಲ್ಲಿ ಯಾವತ್ತೂ ಕೊರತೆಯಾಗಲೇ ಇಲ್ಲ. ದುಬಾರಿ ವಾಚ್‌ಗಳು ಮತ್ತು ಲೇಟೆಸ್ಟ್ ವಿನ್ಯಾಸದ ಬಟ್ಟೆಗಳನ್ನು ಇಷ್ಟಪಡುತ್ತಿದ್ದ ಓಶೋ ಅವರಿಗೆ 90ಕ್ಕೂ ಹೆಚ್ಚು ರೋಲ್ಸ್ ರಾಯ್ಸ್ ಕಾರುಗಳು ಉಡುಗೊರೆಯಾಗಿ ಬಂದಿದ್ದವು. ಓಶೋ ರಜನೀಶ್‌ ಈ ಸಂಖ್ಯೆಯನ್ನು 365ಕ್ಕೆ ಹೆಚ್ಚಿಸುವ ಬಗ್ಗೆಯೂ ಮಾತನಾಡಿದ್ದರು.

ಓಶೋ ಸಾವನ್ನಪ್ಪಿ 34 ವರ್ಷಗಳೇ ಕಳೆದರೂ ಸಾವಿನ ನಿಗೂಢತೆ ಮಾತ್ರ ಬಯಲಾಗಿಲ್ಲ. ಓಶೋ ಹೃದಯ ಸಂಬಂಧಿ ಸಮಸ್ಯೆಯಿಂದ ಮೃತಪಟ್ಟಿದ್ದಾರೆಂದು ಹೇಳಲಾಗಿತ್ತು. ಆದರೆ ಇದೊಂದು ಕೊಲೆ ಎಂಬ ಆರೋಪವೂ ಇದೆ. ಆಸ್ತಿಗಾಗಿ ಓಶೋ ಅವರನ್ನು ವ್ಯವಸ್ಥಿತವಾಗಿ ಹತ್ಯೆ ಮಾಡಿ ಕಥೆ ಕಟ್ಟಲಾಗಿದೆ ಎಂದು ಅನುಯಾಯಿಗಳು ಆರೋಪಿಸುತ್ತಾರೆ. ಈ ಸಂಬಂಧ ಪ್ರಕರಣವೂ ನ್ಯಾಯಾಲಯದಲ್ಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...