ಚಿಕ್ಕಮಗಳೂರು: ಕೆಎಸ್ಆರ್ಟಿಸಿ ಬಸ್ ನಲ್ಲಿ ಮಹಿಳೆಯೊಬ್ಬರು ಕಳೆದುಕೊಂಡಿದ್ದ 4 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ಮಾಲೀಕರಿಗೆ ಒಪ್ಪಿಸುವ ಮೂಲಕ ನಿರ್ವಾಹಕ ಪ್ರಾಮಾಣಿಕತೆ ಮೆರೆದಿದ್ದಾರೆ.
ಗುರುವಾರ ಚಿಕ್ಕಮಗಳೂರಿನಿಂದ ಹಾಸನಕ್ಕೆ ಹೊರಟಿದ್ದ ಬಸ್ ನಲ್ಲಿ ಮುಕ್ರಿಮ್ ಎಂಬುವರು ಚಿನ್ನದ ಸರ ಕಳೆದುಕೊಂಡಿದ್ದಾರೆ. ಬಸ್ ನಿರ್ವಾಹಕ ಪ್ರವೀಣ್ ನಾಯಕ್ ಅವರಿಗೆ ಸರ ಸಿಕ್ಕಿದ್ದು, ವಿಷಯವನ್ನು ಮಾಲೀಕರಿಗೆ ತಿಳಿಸಿದ್ದಾರೆ.
ವಿಭಾಗಕ್ಕೆ ಬಂದು ಚಿನ್ನದ ಸರ ಪಡೆದುಕೊಂಡ ಮುಕ್ರಿಮ್ ಅವರು ಸಾರಿಗೆ ಸಿಬ್ಬಂದಿಗೆ ಸಿಹಿ ಹಂಚಿದ್ದಾರೆ. ಘಟಕದ ವ್ಯವಸ್ಥಾಪಕಿ ಬೇಬಿ ಬಾಯಿ, ಸಹಾಯಕ ಸಂಚಾರ ನಿರೀಕ್ಷಕ ಶ್ರೀನಿವಾಸ, ಬಸ್ ಚಾಲಕ ನಾಗರಾಜ್ ಮೊದಲಾದವರು ಇದ್ದರು.