ನವದೆಹಲಿ: ಆ್ಯಂಟಿ ಬಯಾಟಿಕ್ ಬೇಕಾಬಿಟ್ಟಿ ಬಳಕೆಗೆ ಕೇಂದ್ರ ಸರ್ಕಾರ ಕಡಿವಾಣ ಹಾಕಿದ್ದು, ವೈದ್ಯರ ಚೀಟಿ ಇಲ್ಲದೆ ಔಷಧ ಮಾರಾಟ ಮಾಡದಂತೆ ಆದೇಶ ನೀಡಿದೆ. ಆ್ಯಂಟಿ ಬಯಾಟಿಕ್ ಔಷಧ ನೀಡಿದ ಬಗ್ಗೆ ಪ್ರಿಸ್ಕ್ರಿಪ್ಷನ್ ನಲ್ಲಿ ಕಾರಣ ಬರೆಯಲು ಕೂಡ ಆರೋಗ್ಯ ಮಂತ್ರಾಲಯದಿಂದ ಸೂಚನೆ ನೀಡಲಾಗಿದೆ.
ಆ್ಯಂಟಿ ಬಯಾಟಿಕ್ ಔಷಧಗಳ ಬಳಕೆ ಹೆಚ್ಚಳದಿಂದ ಅಪಾಯ, ಔಷಧ ದುಷ್ಪರಿಣಾಮದಿಂದ ಸಾವು ಹಿನ್ನೆಲೆ ದುರುಪಯೋಗ ತಪ್ಪಿಸಲು ಕೇಂದ್ರ ಸರ್ಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಬೇಕಾಬಿಟ್ಟಿಯಾಗಿ ಆ್ಯಂಟಿ ಬಯಾಟೆಕ್ ಬಳಕೆಗೆ ನಿಷೇಧ ಹೇರಲಾಗಿದ್ದು, ವೈದ್ಯರ ಚೀಟಿ ಇಲ್ಲದೆ ಔಷಧ ಮಳಿಗೆಗಳು ಮಾರಾಟ ಮಾಡುವಂತಿಲ್ಲ. ವೈದ್ಯರು ಕೂಡ ಯಾವ ಕಾರಣಕ್ಕೆ ಅವುಗಳನ್ನು ನೀಡಲಾಗಿದೆ ಎಂಬ ಕಾರಣ ಬರೆಯಬೇಕಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದ್ದು, ಇದಕ್ಕಾಗಿ ಕಠಿಣ ನಿಯಮ ಅನುಷ್ಠಾನಕ್ಕೆ ತೀರ್ಮಾನಿಸಲಾಗಿದೆ.