ನವದೆಹಲಿ: ಜನ್ಮ ದಿನಾಂಕ ಪರಿಷ್ಕರಣೆ ಮತ್ತು ತಿದ್ದುಪಡಿಗೆ ಸ್ವೀಕಾರಾರ್ಹ ದಾಖಲೆಗಳ ಪಟ್ಟಿಯಿಂದ ಆಧಾರ್ ಅನ್ನು ಉದ್ಯೋಗಿಗಳ ಭವಿಷ್ಯ ನಿತ್ಯ ಸಂಸ್ಥೆ(EPFO) ಕೈ ಬಿಟ್ಟಿದೆ.
ಇನ್ನು ಮುಂದೆ ಇಪಿಎಫ್ಒ ನಲ್ಲಿ ಜನ್ಮ ದಿನಾಂಕ ಅಪ್ ಡೇಟ್, ತಿದ್ದುಪಡಿಗೆ, ಆಧಾರ್ ಅರ್ಹ ದಾಖಲೆ ಎಲ್ಲ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಮಾಹಿತಿ ನೀಡಿದೆ. ಈ ಉದ್ದೇಶಕ್ಕಾಗಿ ಇನ್ನು ಮುಂದೆ ಜನ್ಮ ಪ್ರಮಾಣ ಪತ್ರ, ಅಂಕಪಟ್ಟಿ, ಶಾಲಾ ವರ್ಗಾವಣೆ ಪ್ರಮಾಣ ಪತ್ರ, ಪಾನ್ ಕಾರ್ಡ್, ಪಾಸ್ಪೋರ್ಟ್ ಮೊದಲಾದವುಗಳನ್ನು ದಾಖಲೆಯಾಗಿ ಬಳಸಬಹುದು ಎಂದು ಹೇಳಲಾಗಿದೆ.
EPFO ಗಾಗಿ ಆಧಾರ್ ಇನ್ನು ಮುಂದೆ ಜನ್ಮ ದಿನಾಂಕದ ಪುರಾವೆಯಾಗಿ ಮಾನ್ಯವಾಗಿಲ್ಲ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ(EPFO), ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿ ಜನವರಿ 16, 2024 ರಂದು ಮಹತ್ವದ ಸುತ್ತೋಲೆಯನ್ನು ಹೊರಡಿಸಿದ್ದು, ಜನ್ಮ ದಿನಾಂಕದ ಪುರಾವೆಯಾಗಿ ಸ್ವೀಕಾರಾರ್ಹ ದಾಖಲೆಗಳ ಪಟ್ಟಿಯಿಂದ ಆಧಾರ್ ಅನ್ನು ತೆಗೆದುಹಾಕಲಾಗಿದೆ. ಇದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ (UIDAI) ನಿರ್ದೇಶನವನ್ನು ಅನುಸರಿಸಿದೆ ಎಂದು ಹೇಳಲಾಗಿದೆ.
ಆಧಾರ್ ಒಂದು ವಿಶಿಷ್ಟ ಗುರುತಾಗಿದ್ದರೂ, ಆಧಾರ್ ಕಾಯಿದೆ 2016 ರ ಪ್ರಕಾರ ಜನ್ಮ ದಿನಾಂಕದ ಪುರಾವೆಯಾಗಿ ಗುರುತಿಸಲಾಗಿಲ್ಲ. UIDAI ಆಧಾರ್ ಗುರುತಿನ ಪರಿಶೀಲನೆಯನ್ನು ಒದಗಿಸಿದೆ, ಜನ್ಮ ಪುರಾವೆಯಲ್ಲ ಎಂದು ಹೇಳಿದೆ.