ಬೆಂಗಳೂರು : ‘ಸಂವಿಧಾನ ಜಾಗೃತಿ ಜಾಥ ’ ಕಾರ್ಯಕ್ರಮಕ್ಕೆ ಪ್ರತಿ ಜಿಲ್ಲೆಗೆ 25 ಲಕ್ಷ ಅನುದಾನ ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಿರುವಂತೆ, 2024ನೇ ಜನವರಿ ಮತ್ತು ಪೆಬ್ರವರಿ ಮಾಹೆಯಲ್ಲಿ ಸಂವಿಧಾನ ದಿನಾಚರಣೆಯ ಪ್ರಯುಕ್ತ “ಸಂವಿಧಾನ ಜಾಗೃತಿ ಜಾಥ” ರಾಷ್ಟ್ರೀಯ ಮಟ್ಟದ ಸಮಾವೇಶವನ್ನು ನಡೆಸಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಸಂಘಟನಾ ಸಮಿತಿ ಹಾಗೂ ಮಾನ್ಯ ಸಮಾಜ ಕಲ್ಯಾಣ ಸಚಿವರ ಅಧ್ಯಕ್ಷತೆಯ ಕಾರ್ಯನಿರ್ವಹಣಾ ಸಮಿತಿಯನ್ನು ರಚಿಸಿ ಆದೇಶಿಸಲಾಗಿತ್ತು.
ಇದೀಗ ಸಂವಿಧಾನ ದಿನಾಚರಣೆಯ ಪ್ರಯುಕ್ತ “ಸಂವಿಧಾನ ಜಾಗೃತಿ ಜಾಥ” ರಾಷ್ಟ್ರೀಯ ಮಟ್ಟದ ಸಮಾವೇಶವನ್ನು ನಡೆಸಲು ರೂ.18.00 ಕೋಟಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶಿಸಲಾಗಿದೆ.
ಸಂವಿಧಾನ ದಿನಾಚರಣೆಯ ಪ್ರಯುಕ್ತ ಅರಮನೆ ಮೈದಾನ ಬೆಂಗಳೂರು ಇಲ್ಲಿ ನಡೆಸಲಾಗುವ ‘ಸಂವಿಧಾನ ಜಾಗೃತಿ ಜಾಥ” ದ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮದ ಸಮಾವೇಶವಕ್ಕೆ ದಿನಾಂಕ: 26ನೇ ಜನವರಿ 2024ರಂದು ಎಲ್ಲಾ ಜಿಲ್ಲಾ ಕೇಂದ್ರಗಳ ಮೂಲಕ ಚಾಲನೆ ನೀಡಲು ಉದ್ದೇಶಿಸಲಾಗಿರುವ ಸ್ಥಬ್ಧಚಿತ್ರ (Tableau) ಮೆರವಣಿಗೆ ಹಾಗೂ ಇನ್ನಿತರ ಕಾರ್ಯಕ್ರಮಕ್ಕೆ ಪ್ರತಿ ಜಿಲ್ಲೆಗೆ ರೂ.25.00 ಲಕ್ಷ (ಇಪ್ಪತ್ತೈದು ಲಕ್ಷ ರೂಗಳು)ಗಳ ಅನುದಾನವನ್ನು ಕೆ.ಎಸ್.ಎಂ.ಸಿ.ಎ. ಸಂಸ್ಥೆಯ ಮೂಲಕ ぴ (Tableau) ರೂಪಿಸುವಕೊಳ್ಳುವ ಷರತ್ತಿನೊಂದಿಗೆ ಜಿಲ್ಲಾಧಿಕಾರಿಗಳು ಮತ್ತು ಜಂಟಿ/ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಇವರ ಜಂಟಿ ಖಾತೆಗೆ ಆಯುಕ್ತರು ಸಮಾಜ ಕಲ್ಯಾಣ ಇಲಾಖೆ, ಇವರು ಈಗಾಗಲೇ ಕಾರ್ಯಕ್ರಮಕ್ಕೆ ಮಂಜೂರಾತಿ ನೀಡಿರುವ ರೂ.18.00ಕೋಟಿಗಳ ಅನುದಾನದಲ್ಲಿ ಬಿಡುಗಡೆ ಮಾಡಲು ಮಂಜೂರಾತಿ ನೀಡಿ ಆದೇಶಿಸಿದೆ.
ಮುಂದುವರೆದು ಈ ಕೆಳಕಂಡ ಮಾರ್ಗಸೂಚಿಗಳಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಯಶಸ್ವಿಯಾಗಿ ಕಾರ್ಯಕ್ರಮವನ್ನು ನಿರ್ವಹಿಸಲು ಸರ್ಕಾರ ಅಧೀನ ಕಾರ್ಯದರ್ಶಿಗಳು ಸೂಚನೆ ನೀಡಿದ್ದಾರೆ.
![](https://kannadadunia.com/wp-content/uploads/2024/01/jatha-1.jpg)
![](https://kannadadunia.com/wp-content/uploads/2024/01/jatha-2.jpg)
![](https://kannadadunia.com/wp-content/uploads/2024/01/jatha-3.jpg)
![](https://kannadadunia.com/wp-content/uploads/2024/01/jatha-4.jpg)
![](https://kannadadunia.com/wp-content/uploads/2024/01/jatha-5.jpg)