HomeAgricultureರಾಜ್ಯದ ರೈತರಿಗೆ ಗುಡ್‌ ನ್ಯೂಸ್‌ : ಮುಂದಿನ ವಾರ ಮೊದಲ ಕಂತಿನ ʻಬರ ಪರಿಹಾರʼ ಖಾತೆಗೆ...

ರಾಜ್ಯದ ರೈತರಿಗೆ ಗುಡ್‌ ನ್ಯೂಸ್‌ : ಮುಂದಿನ ವಾರ ಮೊದಲ ಕಂತಿನ ʻಬರ ಪರಿಹಾರʼ ಖಾತೆಗೆ ಜಮಾ

ರಾಯಚೂರು : ರಾಜ್ಯ ಸರ್ಕಾರವು ರೈತರಿಗೆ ಸಿಹಿಸುದ್ದಿ ನೀಡಿದ್ದು, ಇನ್ನೊಂದು ವಾರದಲ್ಲಿ ಅರ್ಹ ರೈತರಿಗೆ ಮೊದಲ ಕಂತಿನ ಬರಪರಿಹಾರದ ಮೊತ್ತ ಖಾತೆಗೆ ಜಮಾ ಆಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರ್ಹ ರೈತರಿಗೆ ಶೀಘ್ರವೇ ಮೊದಲ ಕಂತಿನ ಬರಪರಿಹಾರ ಖಾತೆಗೆ ಜಮಾ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಳೆ ಸಮೀಕ್ಷೆ ಆಧರಿಸಿ ಪರಿಹಾರದ ಮೊತ್ತವನ್ನು ರೈತರ ಖಾತೆಗಳಿಗೆ ನೇರವಾಗಿ ಪಾವತಿಸಲಾಗುವುದು ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರದಿಂದ ಬರ ಪರಿಹಾರ ಮಂಜೂರು ವಿಳಂಬವಾಗಿದೆ. ಆದರೂ ರಾಜ್ಯ ಸರ್ಕಾರದಿಂದ ಅರ್ಹ ರೈತರಿಗೆ ತಲಾ 2 ಸಾವಿರ ರೂ. ಬರಪರಿಹಾರ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular