ಬೆಂಗಳೂರು: ದ್ವೇಷ ಭಾಷಣ ಹಿನ್ನೆಲೆಯಲ್ಲಿ ಬಿಜೆಪಿ ಸಂಸದ ಅನಂತ ಕುಮಾರ್ ಹೆಗಡೆ ವಿರುದ್ಧ ಕೇಸ್ ದಾಖಲಾಗಿದ್ದು, ಈ ಬಗ್ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಜಿ.ಪರಮೇಶ್ವರ್, ಕುಮಟಾ ಠಾಣೆಯಲ್ಲಿ ಸಂಸದ ಅನಂತ ಕುಮಾರ್ ಹೆಗಡೆ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಅರೆಸ್ಟ್ ಮಾಡೋದು ಬಿಡೋದು ಸ್ಥಳೀಯ ಪೊಲೀಸರ ವಿವೇಚನೆಗೆ ಬಿಟ್ಟದ್ದು. ಸ್ಥಳೀಯ ಪೊಲೀಸರು ಸಾಕ್ಷ್ಯಗಳನ್ನು ಆಧರಿಸಿ ಕ್ರಮ ಕೈಗೊಳ್ಳುತ್ತಾರೆ ಎಂದಿದ್ದಾರೆ.
ಯಾರನ್ನಾದರೂ ಬಂಧಿಸಿ ಅಥವಾ ಬಂಧಿಸಿದವರನ್ನು ಬಿಟ್ಟುಬಿಡಿ ಅಂತ ನಾನ್ಯಾವತ್ತೂ ಹಸ್ತಕ್ಷೇಪ ಮಾಡುವುದಿಲ್ಲ. ಸ್ಥಳೀಯ ಪೊಲೀಸರು ಕೇಸ್ ದಾಖಲಿಸಿರುವ ಸೆಕ್ಷನ್ ಅಡಿಯಲ್ಲಿ ಬಂಧನಕ್ಕೆ ಅವಕಾಶವಿದ್ದರೆ ಬಂಧಿಸುತ್ತಾರೆ. ಅದು ಅವರ ನಿರ್ಧಾರ ಎಂದು ಹೇಳಿದರು.