ನವದೆಹಲಿ : ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು, ಎಲ್ಲೆಡೆ ರಾಮನ ಜಪ ತಪ ಆರಂಭವಾಗಿದೆ. ಇದೀಗ ‘ಜೈ ಶ್ರೀ ರಾಮ್’ ಹಾಡಿಗೆ ಅಮೆರಿಕಾದ ಟೆಸ್ಲಾ ಕಾರುಗಳ ಸುಂದರ ಲೈಟಿಂಗ್ ಶೋ ನಡೆಸಿದ್ದು, ಈ ವಿಡಿಯೋ ವೈರಲ್ ಆಗಿದೆ.
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭವ್ಯವಾದ ರಾಮ ದೇವಾಲಯದ ಉದ್ಘಾಟನಾ ಸಮಾರಂಭಕ್ಕೆ ಮುಂಚಿತವಾಗಿ ಯುಎಸ್ ನಲ್ಲಿ ಭಾರತೀಯರು ಶನಿವಾರ ನ್ಯೂಜೆರ್ಸಿಯಲ್ಲಿ ಕಾರ್ ರ್ಯಾಲಿಯನ್ನು ಆಯೋಜಿಸಿದ್ದರು. ‘ಜೈ ಶ್ರೀ ರಾಮ್’ ಹಾಡಿಗೆ ಅಮೆರಿಕಾದ ಟೆಸ್ಲಾ ಕಾರುಗಳ ಸುಂದರ ಲೈಟಿಂಗ್ ಶೋ ನಡೆಸಿದ್ದು, ಈ ವಿಡಿಯೋ ವೈರಲ್ ಆಗಿದೆ. ಟೆಸ್ಲಾ ಕಂಪನಿಯ ಕಾರುಗಳ ಲೈಟ್ ಗಳು ಡಾನ್ಸ್ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ವಿಶ್ವದ ಪ್ರತಿಷ್ಠಿತ ಕಾರು ಕಂಪನಿಯಾದ ಟೆಸ್ಲಾ ತನ್ನ ಕಾರುಗಳನ್ನು ಬಳಸಿಕೊಂಡು ಲೈಟಿಂಗ್ಸ್ ಮೂಲಕ ಜೈ ಶ್ರೀರಾಮ್.. ಜೈ ಶ್ರೀರಾಮ್.. ರಾಜಾರಾಮ್ʼ ಹಾಡಿನ ಮೂಲಕ ಗೌರವ ಸಲ್ಲಿಸಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರತೀಯರ ಗಮನ ಸೆಳೆದಿದೆ.