ಬೆಂಗಳೂರು: ಒಳ್ಳೆ ತನಕ್ಕೆ, ಒಳ್ಳೆ ನಡವಳಿಕೆಗೆ ಒಳ್ಳೆಯದೇ ಆಗುತ್ತದೆ. ಅದಕ್ಕೆ ದೆಹಲಿ ಭೇಟಿಯೇ ಒಂದು ಉದಾಹರಣೆ ಎಂದು ಮಾಜಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ವರಿಷ್ಠರ ಭೇಟಿ ಬಳಿಕ ದೆಹಲಿಯಿಂದ ವಾಪಾಸ್ ಆಗಿರುವ ವಿ.ಸೋಮಣ್ಣ, ನಾನು ರಾಜ್ಯಸಭೆಯ ಸ್ಥಾನ ಕೇಳಿದ್ದೇನೆ. ನನಗೆ ಮೂರು ಕಷ್ಟದ ಕ್ಷೇತ್ರ ಕೊಡಿ ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಹೇಳಿದ್ದಾಗಿ ತಿಳಿಸಿದ್ದಾರೆ.
28 ಕ್ಷೇತ್ರಗಳ ಪೈಕಿ 3 ಕ್ಷೇತ್ರ ವಹಿಸಿದ್ರೆ ಕೆಲಸ ಮಾಡುತ್ತೇನೆ. ಯಾವುದೇ ಮೂರು ಕ್ಷೇತ್ರ ಕೊಡಲಿ ಗೆಲ್ಲಿಸಿಕೊಂಡು ಬರುತ್ತೇನೆ. ಪಕ್ಷದಲ್ಲಿ ನನಗೆ ನನ್ನದೇ ಶ್ರಮ ಇದೆ. ದೆಹಲಿ ಭೇಟಿ ಸಮಾಧಾನ ತಂದಿದೆ. ಅಮಿತ್ ಶಾ ಅವರ ನಡವಳಿಕೆ, ಅವರ ತೀರ್ಮಾನ ಎಲ್ಲವೂ ಸಮಾಧಾನವಾಗಿದೆ. ಎಲ್ಲವೂ ಕೂಡ ಸುಖಾಂತ್ಯವಾಗಿದೆ ಎಂದು ತಿಳಿಸಿದ್ದಾರೆ.