ಬೆಂಗಳೂರು : ಪಬ್ ನಲ್ಲಿ ನಿಯಮ ಮೀರಿ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಳೆ ತನಿಖಾ ವರದಿ ಸಲ್ಲಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಪ್ರಕರಣ ಸಂಬಂಧ ಸ್ಟಾರ್ ನಟರು ನೀಡಿದ ಹೇಳಿಕೆ ಸಂಬಂಧ ಸುಬ್ರಹ್ಮಣ್ಯ ನಗರ ಪೊಲೀಸರು ಪ್ರಕರಣದ ತನಿಖಾ ವರದಿ ತಯಾರು ಮಾಡಿದ್ದು, ಕಮಿಷನರ್ ದಯಾನಂದ್ ಸೂಚನೆ ಮೇರೆಗೆ ಮಲ್ಲೇಶ್ವರದ ಎಸಿಪಿ ಈ ವರದಿ ತಯಾರಿಸಿದ್ದಾರೆ. ನಾಳೆ ತನಿಖಾ ವರದಿ ಸಲ್ಲಿಕೆ ಆಗಲಿದೆ.
ತನಿಖೆಯ ವೇಳೆ ನಟ ದರ್ಶನ ಅವರಿಗೆ ಪೊಲೀಸ್ ಅಧಿಕಾರಿಗಳು ಗಾಂಜಾ ಬಳಕೆ ಆಗಿತ್ತಾಎಂದು ದರ್ಶನ್ಗೆ ಪೊಲೀಸರು ಪ್ರಶ್ನೆ ಮಾಡಿದ್ದಾರೆ..? ಈ ಪ್ರಶ್ನೆಗೆ ದರ್ಶನ್ ಗರಂ ಆದ ನಟ ದರ್ಶನ್ ‘ಗಾಂಜಾ ಬಗ್ಗೆ ಏಕೆ ಕೇಳುತ್ತಿದ್ದೀರಿ? ಯಾವುದಾದ್ರೂ ಮಾಧ್ಯಮದಲ್ಲಿ ಆ ಬಗ್ಗೆ ಬಂದಿದ್ಯಾ ಎಂದು ದರ್ಶನ್ ಮರು ಪ್ರಶ್ನೆ ಮಾಡಿದ್ದಾರೆ, ಅಲ್ಲಿ ಯಾವುದೇ ರೀತಿಯ ಮಾದಕ ವಸ್ತು ಬಳಕೆ ಆಗಿಲ್ಲ ಎಂದು ದರ್ಶನ್ ಉತ್ತರಿಸಿದ್ದಾರೆ.
ಕಾಟೇರ ಸಿನಿಮಾದ ಸಕ್ಸಸ್ ಹಿನ್ನೆಲೆ ಚಿತ್ರತಂಡ ಬೆಂಗಳೂರಿನ ರಾಜಾಜಿನಗರದ ಒರಾಯನ್ ಮಾಲ್ ಬಳಿ ಇರುವ ಜೆಟ್ ಲ್ಯಾಗ್ ಪಬ್ನಲ್ಲಿ ಪಾರ್ಟಿ ಆಯೋಜಿಸಿತ್ತು. ಹೊಟೇಲ್, ಬಾರ್ ಅಂಡ್ ರೆಸ್ಟೋರೆಂಟ್ ಗೆ ಅನ್ವಯವಾಗುವ ನಿಯಮ ಪ್ರಕಾರ ಮಧ್ಯರಾತ್ರಿ 1 ಗಂಟೆಗೆ ಪಬ್ ಮುಚ್ಚಬೇಕು. ಒಂದು ಗಂಟೆ ಆಗುತ್ತಿದ್ದಂತೆ ಪಾರ್ಟಿ ಪೂರ್ಣಗೊಳಿಸಬೇಕಿತ್ತು, ಅವಧಿ ಮೀರಿ ಪಾರ್ಟಿ ನಡೆಸಿದ ಹಿನ್ನೆಲೆ ಪೊಲೀಸರು ಪಬ್ ಮಾಲೀಕರ ವಿರುದ್ಧ ಎಫ್ ಐ ಆರ್ ದಾಖಲಿಸಿ ನಟರಿಗೂ ನೋಟಿಸ್ ನೀಡಿದ್ದರು.
ನಟ ದರ್ಶನ್, ಡಾಲಿ ಧನಂಜಯ್, ಚಿಕ್ಕಣ್ಣ, ರಾಕ್ ಲೈನ್ ವೆಂಕಟೇಶ್, ಅಭಿಷೇಕ್ ಅಂಬರೀಷ್, ನಿನಾಸಂ ಸತೀಶ್ ಸಂಗೀತ ನಿರ್ದೇಶಕ ಹರಿಕೃಷ್ಣ, ನಿರ್ದೇಶಕ ತರುಣ್ ಸುಧೀರ್ ಸೇರಿ 8 ಮಂದಿಗೆ ನೋಟಿಸ್ ನೀಡಲಾಗಿತ್ತು. ನಟ ದರ್ಶನ್ ಸೇರಿದಂತೆ ಎಲ್ಲರೂ ಪೊಲೀಸ್ ಠಾಣೆಗೆ ಬಂದು ತಮ್ಮ ಹೇಳಿಕೆ ದಾಖಲಿಸಿದ್ದರು.